ಚಿನ್ನಾಭರಣ ಖರೀದಿಗೆ ಮುಂದಾಗುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು, ಖರೀದಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ಕಳೆದ ಎರಡು-ಮೂರು ದಿನಗಳಲ್ಲಿ ಪ್ರತಿ ಗ್ರಾಂ ಚಿನ್ನದ ದರದಲ್ಲಿ ಸುಮಾರು 600 ರೂ.ಗಳಷ್ಟು ಇಳಿಕೆ ಕಂಡಿದೆ. ಇದರ ಜೊತೆಗೆ, ಬರೋಬ್ಬರಿ 1.95 ಲಕ್ಷ ರೂ.ಗಳ ಗಡಿ ದಾಟಿದ್ದ ಬೆಳ್ಳಿ ದರವು ಸಹ ಗಣನೀಯವಾಗಿ ಕಡಿಮೆಯಾಗಿ ಇದೀಗ 1.58 ಲಕ್ಷ ರೂ.ಗಳ ಸಮೀಪಕ್ಕೆ ತಲುಪಿದೆ.
ಹಣಕಾಸು ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರಗಳು ಮುಂಬರುವ ಡಿಸೆಂಬರ್ ತಿಂಗಳ ವೇಳೆಗೆ ಮತ್ತಷ್ಟು ಕಡಿತಗೊಳ್ಳುವ ನಿರೀಕ್ಷೆಯಿದೆ. ಈ ದರ ಇಳಿಕೆಯು ಹಬ್ಬದ ಸಮಯದಲ್ಲಿ ಆಭರಣ ಖರೀದಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ.

