ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನದ ಬೆಲೆ ಏರಿಳಿತ ಮುಂದುವರಿದಿದೆ. ನಿನ್ನೆ 50 ರೂ ಇಳಿದಿದ್ದ ಚಿನ್ನದ ಬೆಲೆ ಇಂದು ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ.
9,010 ರೂ ಇದ್ದ ಆಭರಣ ಚಿನ್ನದ ಬೆಲೆ 9,060 ರೂಗೆ ಏರಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಏರಿದರೆ, ಇನ್ನೂ ಕೆಲವೆಡೆ ಬೆಲೆ ಕುಸಿದಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 98,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 90,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,100 ರುಪಾಯಿಯಲ್ಲಿ ಇದೆ.