ತಿರುವನಂತಪುರದಲ್ಲಿ ಜಿದ್ದಾಜಿದ್ದಿ: ಕೊನೆಗೂ ತರೂರ್‌ಗೆ ಪ್ರಯಾಸದ ಗೆಲುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ತಿರುವನಂತಪುರ ಲೋಕಸಭಾ ಕ್ಷೇತ್ರ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು.ಅಂತಿಮವಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಯಾಸದ ಗೆಲುವು ದಾಖಲಿಸಿದ್ದಾರೆ.

ತರೂರ್ ಅವರ ನಿಕಟ ಪ್ರತಿಸ್ಪರ್ಧಿ ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಸೋಲು ಅನುಭವಿಸಿದ್ದಾರೆ.ಇದರೊಂದಿಗೆ ಕೇರಳದಲ್ಲಿ ಎರಡನೇ ಸ್ಥಾನ ಗೆಲ್ಲುವ ಎನ್‌ಡಿಎಗೆ ಅವಕಾಶ ಕೈತಪ್ಪಿದೆ.

ತರೂರ್ 3.5 ಲಕ್ಷಕ್ಕೂ ಅಧಿಕ ಮತ ಗಳಿಸಿದ್ದು, ರಾಜೀವ್ ಅವರಿಗಿಂತಲೂ 15 ಸಾವಿರ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

‘ನಾವು ಗೆಲುವಿನ ಸನಿಹಕ್ಕೆ ಬಂದಿದ್ದೆವು. ದಾಖಲೆಯ ಅಂತರದ ಮತ ಹಂಚಿಕೆಯನ್ನು ಪಡೆದಿದ್ದೇವೆ. ಇದು ಕೇರಳದ ಜನತೆ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಇಂದು ನನಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ ಕ್ಷೇತ್ರದ ಜನರಿಗಾಗಿ ಸೇವೆ ಸಲ್ಲಿಸಲಿದ್ದೇನೆ’ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಪ್ರತಿಕ್ರಿಯಿಸಿರುವ ತರೂರ್, ‘ನಿಕಟ ಪೈಪೋಟಿ ಒಡ್ಡಿದ ರಾಜೀವ್ ಚಂದ್ರಶೇಖರ್ ಹಾಗೂ ಪಣ್ಯನ್ ರವೀಂದ್ರನ್ ಅವರನ್ನು ನಾನು ಅಭಿನಂದಿಸುತ್ತೇನೆ. ಅಂತಿಮವಾಗಿ ಕಳೆದ ಮೂರು ಬಾರಿಯಂತೆ ಈ ಸಲವೂ ತಿರುವನಂತಪುರದ ಜನತೆ ನನ್ನನ್ನು ಆರ್ಶಿವರ್ದಿಸಿದ್ದಾರೆ. ಈ ಕ್ಷೇತ್ರದ ಜನತೆ ನನ್ನ ಮೇಲೆ ಇರಿಸಿರುವ ನಂಬಿಕೆಯನ್ನು ಈಡೇರಿಸಲು ಮತ್ತಷ್ಟು ಶ್ರಮವಹಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!