ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಬುರ್ಕಿನಾ ಫಾಸೊದಲ್ಲಿ ಜಿಹಾದಿ ಗುಂಪಿನ ದಾಳಿ ನಡೆದಿದ್ದು, 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಾಗಿ ಸೈನಿಕರು, ವೈದ್ಯಕೀಯ ಸಹಾಯಕ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳಿದ್ದಾರೆ. ಮಿಲಿಟರಿ ನೆಲೆ ಮತ್ತು ದೀರ್ಘಕಾಲದಿಂದ ಮುತ್ತಿಗೆ ಹಾಕಿದ್ದ ಜಿಬೊ ಸೇರಿದಂತೆ ಹಲವು ಸ್ಥಳಗಳ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆದಿದೆ.
ಸಹೇಲ್ ಪ್ರದೇಶದಲ್ಲಿ ಸಕ್ರಿಯವಾಗಿರುವ ಜಮಾತ್ ನಸ್ರ್ ಅಲ್-ಇಸ್ಲಾಂ ವಾಲ್-ಮುಸ್ಲಿಮಿನ್ ಸಕ್ರಿಯವಾಗಿದ್ದು, ಇದು ಅಲ್-ಖೈದಾ ಜೊತೆ ನಂಟು ಹೊಂದಿದೆ. ಈ ಗುಂಪು ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮಿಲಿಟರಿ ಆಡಳಿತ ಮಂಡಳಿಯಿಂದ ನಡೆಸಲ್ಪಡುತ್ತಿರುವ, ಜಾಗತಿಕ ಉಗ್ರ ತಾಣ ಎಂದು ಕರೆಯಲ್ಪಡುವ ಆಫ್ರಿಕಾದ ಸಹೇಲ್ ಪ್ರದೇಶ ಭದ್ರತಾ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾಗಿದೆ. 2022 ರಲ್ಲಿ ಎರಡು ದಂಗೆಗಳಿಗೆ ಕಾರಣವಾದ ಹಿಂಸಾಚಾರದ ಪರಿಣಾಮವಾಗಿ ಬುರ್ಕಿನಾ ಫಾಸೊದ ಅರ್ಧದಷ್ಟು ಭಾಗವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಸರ್ಕಾರಿ ಭದ್ರತಾ ಪಡೆಗಳ ಮೇಲೆ ಕಾನೂನುಬಾಹಿರ ಹತ್ಯೆಗಳ ಆರೋಪವೂ ಇದೆ.