ಹೊಸದಿಗಂತ ಡಿಜಿಟಲ್ ಡೆಸ್ಕ್:
ಫುಡ್ ಅಲರ್ಜಿ ಯಾರಿಗಿರಲ್ಲ ಹೇಳಿ? ಒಬ್ಬೊಬ್ಬರಿಗೂ ಒಂದೊಂದು ಆಹಾರ ಪದಾರ್ಥ ತಿಂದರೆ ಆಗುವುದಿಲ್ಲ. ಚರ್ಮದ ತುರಿಕೆ, ದದ್ದು, ತುಟಿಗಳು, ಮುಖ, ನಾಲಿಗೆ, ಗಂಟಲು ಮತ್ತು ಇತರ ಭಾಗಗಳ ಊತ. ಹೊಟ್ಟೆ ನೋವು, ವಾಕರಿಕೆ, ವಾಂತಿ, ತಲೆತಿರುಗುವಿಕೆ ಮತ್ತು ಮೂರ್ಛೆ ಸಹ ಸಂಭವಿಸಬಹುದು. ಇದೇ ರೀತಿ ಈ ಯುವತಿಗಿರುವ ಆಹಾರದ ಅಲರ್ಜಿ ಬಗ್ಗೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ!. ಯಾಕಂದ್ರೆ ಈಕೆಗೆ ಒಂದಲ್ಲಾ..ಎರಡಲ್ಲಾ ಬರೋಬ್ಬರಿ 37ಫುಟ್ ಅಲರ್ಜಿ ಇದೆಯಂತೆ!
ಜೋನ್ನೆ ಫ್ಯಾನ್ ಎಂಬ ಕಂಟೆಂಟ್ ಕ್ರಿಯೇಟರ್ ಎದುರಿಸುತ್ತಿರುವ ಆಹಾರದ ಅಲರ್ಜಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ನನಗೆ ‘ಸಾಯಲು 37 ಹೊಸ ಮಾರ್ಗಗಳಿವೆ’ ಎಂಬ ಶೀರ್ಷಿಕೆ ನೀಡಿರುವ ಇನ್ಸ್ಟಾ ಪೋಸ್ಟ್ ವೈರಲ್ ಆಗುತ್ತಿದೆ.
ದಕ್ಷಿಣ ಕೊರಯಾದ ಸಿಯೋಲ್‌ನ ಜೋನ್ನೆ ಫ್ಯಾನ್ ತಾನು ಎದುರಿಸುತ್ತಿರುವ 37 ರೀತಿಯ ಆಹಾರ ಅಲರ್ಜಿಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾಳೆ. ಇತ್ತೀಚೆಗೆ ಆಸ್ಪತ್ರೆಯಲ್ಲಿ ವೈದ್ಯರು ಪ್ಯಾಚ್ ಪರೀಕ್ಷೆ ವೇಳೆ ಇನ್ನೂ ಅನೇಕ ಹೊಸ ರೀತಿಯ ಅಲರ್ಜಿಗಳು ಪತ್ತೆಯಾಗಿವೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಈ ಅಲರ್ಜಿಗಳು ಆಕೆಯ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಿದೆ ಎಂದು ಬರೆದುಕೊಂಡಿದ್ದಾಳೆ.
View this post on Instagram