ಪ್ರಧಾನಿ ಮೋದಿಯಿಂದ ನಾಳೆ 70 ಸಾವಿರ ಯುವವರ್ಗಕ್ಕೆ ಉದ್ಯೋಗ ನೇಮಕಾತಿ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರ್ಕಾರದ ರೋಜ್‌ಗಾರ್ ಮೇಳದಲ್ಲಿ ಹೊಸದಾಗಿ ನೇಮಕಗೊಂಡ 700,000ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವೀಡಿಯೊ ಕಾನರೆನ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ .

ದೇಶದ ಯುವಶಕ್ತಿಗೆ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಒದಗಿಸಬೇಕೆಂಬ ಪ್ರಧಾನಿ ಮೋದಿಯವರ ಸಂಕಲ್ಪದಡಿ ಈ ನೇಮಕಾತಿಗಳು ನಡೆಯುತ್ತಿವೆ.

ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರೋಜ್‌ಗಾರ್ ಮೇಳದ ಮೂಲಕ 10ಲಕ್ಷ ಮಂದಿಗೆ ಉದ್ಯೋಗ ನೀಡಿಕೆಯ ಬೃಹತ್ ಯೋಜನೆಯಡಿ ಈ ನೇಮಕಾತಿಗಳು ನಡೆಯುತ್ತಿವೆ .ಆಯ್ಕೆಯಾದ ಈ ಯುವಕ-ಯುವತಿಯರು ದೇಶಾದ್ಯಂತ 44 ಪ್ರದೇಶಗಳಲ್ಲಿ ಕಂದಾಯ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಯಾಗಲಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ 10.30 ಕ್ಕೆ ವೀಡಿಯೋ ಕಾನರೆನ್ಸಿಂಗ್ ಮೂಲಕ 70,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಲಿರುವರೆಂದು ಪಿಎಂಒ ಕಚೇರಿ ಪ್ರಕಟನೆ ತಿಳಿಸಿದೆ.ಈಗಾಗಲೇ 4.5ಲಕ್ಷಕ್ಕೂ ಅಕ ಯುವಕ-ಯುವತಿಯರಿಗೆ ಈ ವರ್ಷ ಉದ್ಯೋಗ ನೇಮಕಾತಿಗಳು ಕೇಂದ್ರ ಸರಕಾರದ ಈ ಯೋಜನೆಯಡಿ ನಡೆದಿವೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!