ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಬಫೆಲೋ ನಗರದ ಸೂಪರ್ ಮಾರ್ಕೆಟ್ ನಲ್ಲಿ ನಡೆದ ಗುಂಡಿನ ದಾಳಿಗೆ ಅಧ್ಯಕ್ಷ ಜೋ ಬಿಡೆನ್ ಸಂತಾಪ ಸೂಚಿಸದ್ದಾರೆ ಹಾಗೂ ಆಂತರಿಕ ಭಯೋತ್ಪಾದನೆ ತಡೆಯಲು ಕರೆ ನೀಡಿದ್ದಾರೆ.
ಈ ಕುರಿತು ತಮ್ಮ ಶ್ವೇತಭವನದಿಂದ ಹೇಳಿಕೆ ನೀಡಿರುವ ಬಿಡೆನ್ “ಆಂತರಿಕ ಭಯೋತ್ಪಾನೆಯು ದೇಶಕ್ಕೆ ಮಾರಕ. ವರ್ಣಬೇಧ ನೀತಿ, ಜಾತೀಯತೆ ಸೇರಿದಂತೆ ಬಿಳಿಯ ರಾಷ್ಟ್ರೀಯವಾದಿ ಸಿದ್ಧಾಂತವು ಅಮೇರಿಕದ ಬೆಳವಣಿಗೆಗೆ ಮಾರಕ. ಪರಸ್ಪರ ದ್ವೇಷ ಭಾವನೆ ಎಂದೂ ಇರಬಾರದು. ದ್ವೇಷದಿಂದ ತುಂಬಿದ ಆಂತರಿಕ ಭಯೋತ್ಪಾದನೆಯನ್ನು ತಡೆಯಲು ಕೊನೆಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ” ಎಂದು ಕರೆ ನೀಡಿದ್ದಾರೆ.
ಇತ್ತಿಚೆಗೆ ಅಮೆರಿಕದಲ್ಲಿ ಹೆಚ್ಚುತ್ತಿರುವ ಶಸ್ತ್ರಾಸ್ತ್ರ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಡೆನ್ ಹೇಳಿದ್ದಾರೆ. ಅಕ್ರಮ ಬಂದೂಕುಗಳ ತಡೆ, ಶಸ್ತ್ರಾಸ್ತ್ರ ಕಳ್ಳ ಸಾಗಾಟ ಮುಂತಾದವುಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಬಿಡೆನ್ ಹೇಳಿದ್ದಾರೆ.