ಬೆಂಗಳೂರಿನ ಉದ್ಯಾನಗಳಲ್ಲಿ ಜಾಗಿಂಗ್ ಬ್ಯಾನ್! ಗಡಿಯಾರದ ದಿಕ್ಕಿನಲ್ಲಿ ಮಾತ್ರ ನಡೀಬೇಕಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಉದ್ಯಾನಗಳಲ್ಲಿ ಜಾಗಿಂಗ್ ಮಾಡುವುದನ್ನು ನಿಷೇಧಿಸಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾರ್ವಜನಿಕ ಉದ್ಯಾನವನಕ್ಕೆ ಬರುವವರು ಜಾಗಿಂಗ್ ಮಾಡಬಾರದು ಮತ್ತು ‘ಗಡಿಯಾರದ ದಿಕ್ಕಿನಲ್ಲಿ’ ಮಾತ್ರ ನಡೆಯಬೇಕು ಎಂದು ಹೇಳಲಾಗುತ್ತಿರುವ ಪೋಸ್ಟ್ ಒಂದನ್ನು ಸಹನಾ ಶ್ರಿಕ್ @sahana_srik ಎನ್ನುವವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಆ ಪೋಸ್ಟ್ ಈಗ ವೈರಲ್ ಆಗುತ್ತಿದೆ.

ಜಾಗಿಂಗ್ ಮಾಡಬಾರದು ಅನ್ನೋ ಬಗ್ಗೆ ಅಸಮಾಧಾನ ಹೊರಹಾಕಿದ ಸಹನಾ, ‘ನೀವು ತಮಾಷೆ ಮಾಡ್ತಾ ಇದ್ದೀರಾ? ಇಂದಿರಾನಗರ ಪಾರ್ಕ್‌ನಲ್ಲಿ ಜಾಗಿಂಗ್ ಮಾಡಬಾರದೇ? ಮುಂದೇನು ಮಾಡಬೇಕು ನಾವು. ಪಾರ್ಕ್‌ಗಳಲ್ಲಿ ಪಾಶ್ಚಾತ್ಯ ಬಟ್ಟೆ ಬೇಡವೇ? ಜಾಗಿಂಗ್ ಮಾಡುವವರು ಪಾರ್ಕ್‌ಗಳಿಗೆ ಏನು ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಉದ್ಯಾನದಲ್ಲಿ ಬೆಳಗ್ಗೆ ವಾಕಿಂಗ್ ಮಾಡಲು ಬರುವವರು ನಡಿಗೆದಾರರ ಸಂಘವನ್ನು ಮಾಡಿಕೊಂಡು, ಸಾರ್ವಜನಿಕ ಆಸ್ತಿ ಬಳಸಲು ಬರುವವರ ಮೇಲೆ ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ. ನಿರ್ವಹಣೆ ಕೆಲಸದ ಮೂಲಕ ಈ ಸ್ಥಳಗಳ ಕೃತಕ ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ. ಕೆಲವು ಸ್ಥಳಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ರಚಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!