ಇತ್ತೀಚಿನ ದಿನಗಳಲ್ಲಿ ಕೀಲು ನೋವು ಕೇವಲ ವಯಸ್ಸಾದವರಿಗಷ್ಟೇ ಸೀಮಿತವಾಗಿಲ್ಲ, ಮಧ್ಯ ವಯಸ್ಸಿನವರಲ್ಲಿಯೂ ಹೆಚ್ಚುತ್ತಿದೆ. ಮೊಣಕಾಲು, ಮೊಣಕೈ, ಭುಜ ಮುಂತಾದ ಭಾಗಗಳಲ್ಲಿ ನೋವು, ಊತ ಮತ್ತು ಬಿಗಿತ ಕಂಡುಬರುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಕೀಲುಗಳು ಮತ್ತು ಮೂಳೆಗಳನ್ನು ಬಲಪಡಿಸಲು ದಿನನಿತ್ಯದ ಆಹಾರದಲ್ಲಿ ಸರಿಯಾದ ಬದಲಾವಣೆಗಳು ಅತ್ಯಗತ್ಯ. ಸಂಧಿವಾತ, ಅಸ್ಥಿಸಂಧಿವಾತ ಮತ್ತು ಇತರ ಕೀಲು ಸಮಸ್ಯೆಗಳ ತೀವ್ರತೆಯನ್ನು ಆಹಾರದ ಮೂಲಕವೇ ಕಡಿಮೆ ಮಾಡಬಹುದು.
ಬಾಳೆಹಣ್ಣು – ಪೊಟ್ಯಾಸಿಯಮ್ ಶಕ್ತಿ
ಬಾಳೆಹಣ್ಣು ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್‌ನ ಉತ್ತಮ ಮೂಲ. ಪೊಟ್ಯಾಸಿಯಮ್ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ, ಮೆಗ್ನೀಸಿಯಮ್ ಕೀಲು ನೋವನ್ನು ತಗ್ಗಿಸುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬಾಳೆಹಣ್ಣು ತಿನ್ನುವುದರಿಂದ ಮೂಳೆಗಳು ಬಲವಾಗುತ್ತವೆ.
ರಾಗಿ, ಬೇಳೆ, ಸಜ್ಜೆ – ಪೋಷಕಾಂಶಗಳ ಭಂಡಾರ
ರಾಗಿ, ಬೇಳೆ ಮತ್ತು ಸಜ್ಜೆಗಳಲ್ಲಿ ಇರುವ ಪ್ರೋಟೀನ್, ಕ್ಯಾಲ್ಸಿಯಮ್ ಮತ್ತು ಫೈಬರ್ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕೀಲುಗಳ ಚಲನೆ ಸುಗಮವಾಗುತ್ತದೆ, ನೋವು ಕಡಿಮೆಯಾಗುತ್ತದೆ.
ಅರಿಶಿನ ಹಾಲು – ಉರಿಯೂತ ನಿವಾರಕ
ಹಾಲಿಗೆ ಅರ್ಧ ಚಮಚ ಅರಿಶಿನ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಉರಿಯೂತ ನಿವಾರಕ ಹಾಗೂ ಆಂಟಿಸೆಪ್ಟಿಕ್ ಲಾಭ ದೊರೆಯುತ್ತದೆ. ಇದು ಕೀಲು ನೋವನ್ನು ಕಡಿಮೆ ಮಾಡುವುದರ ಜೊತೆಗೆ ಊತವನ್ನು ಸಹ ತಗ್ಗಿಸುತ್ತದೆ.
ಗ್ರೀನ್ ಟೀ – ಆ್ಯಂಟಿಆಕ್ಸಿಡೆಂಟ್ ಶಕ್ತಿ
ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿನ ಆ್ಯಂಟಿಆಕ್ಸಿಡೆಂಟ್ ಮಟ್ಟ ಹೆಚ್ಚುತ್ತದೆ. ಇದು ಮೂಳೆಗಳ ಬಲವನ್ನು ಕಾಪಾಡಿ, ಕೀಲು ನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಉರಿಯೂತ ನಿವಾರಕ ಗುಣಗಳಿಂದ ಊತ ತಗ್ಗುತ್ತದೆ.
ಕೀಲು ನೋವಿನ ಸಮಸ್ಯೆಯನ್ನು ನಿರ್ಲಕ್ಷಿಸದೆ, ಸಮಯಕ್ಕೆ ಸರಿಯಾದ ಆಹಾರ ಮತ್ತು ಜೀವನಶೈಲಿಯ ಬದಲಾವಣೆ ಮಾಡುವುದು ಅಗತ್ಯ. ಸರಿಯಾದ ಆಹಾರ ಪದ್ಧತಿ, ಹಗುರ ವ್ಯಾಯಾಮ ಮತ್ತು ತಜ್ಞರ ಸಲಹೆ ಪಾಲನೆ ಮಾಡಿದರೆ ಕೀಲು ನೋವನ್ನು ಕಡಿಮೆ ಮಾಡಿ, ಜೀವನ ಗುಣಮಟ್ಟವನ್ನು ಸುಧಾರಿಸಬಹುದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)