ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್, ಸಿದ್ರಾ ಅಮೀನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಗ್ಲೆಂಡ್‌ ಸೀಮಿತ ಓವರ್‌ ತಂಡದ ಕ್ಯಾಪ್ಟನ್ ಜೋಸ್ ಬಟ್ಲರ್ ಹಾಗೂ ಪಾಕಿಸ್ತಾನದ ಆಟಗಾರ್ತಿ ಸಿದ್ರಾ ಅಮೀನ್ ನವೆಂಬರ್ ತಿಂಗಳ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇಂಗ್ಲೆಂಡ್‌ನ ಟಿ-20 ವಿಶ್ವಕಪ್ ವಿಜೇತ ತಂಡದ ನಾಯಕ ಜೋಸ್ ಬಟ್ಲರ್ ಅವರು ನವೆಂಬರ್‌ನಲ್ಲಿ ನಡೆದಿದ್ದ ವಿಶ್ವಕಪ್‌ ನಲ್ಲಿ ಅದ್ಭಿತ ಪ್ರದರ್ಶನ ನೀಡಿದ್ದರು. ಬಟ್ಲರ್ ಭಾರತ ವಿರುದ್ಧದ ಸೆಮಿಫೈನಲ್‌ನಲ್ಲಿ ಗೆಲುವಿಗಾಗಿ 169 ರನ್‌ಗಳನ್ನು ಬೆನ್ನಟ್ಟಿದ ಸಂದರ್ಭದಲ್ಲಿ 49 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ತಮ್ಮ ಸಂಪೂರ್ಣ ಸ್ಟ್ರೋಕ್‌ಪ್ಲೇಯನ್ನು ಪ್ರದರ್ಶಿಸಿದ್ದರು.
ಫೈನಲ್ ಪಂದ್ಯದಲ್ಲಿ, ಬಟ್ಲರ್ ಪಾಕಿಸ್ತಾನದ ಬೌಲಿಂಗ್ ದಾಳಿಯ ವಿರುದ್ಧ ಅಮೂಲ್ಯವಾದ 26 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ತಮ್ಮ ಎರಡನೇ T20 ವಿಶ್ವಕಪ್ ಟ್ರೋಫಿ ಗೆಲುವಿನತ್ತ ಮುನ್ನಡೆಸಿದರು.ಮಹಿಳೆಯರ ವಿಭಾಗದಲ್ಲಿ, ನವೆಂಬರ್‌ನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಐರ್ಲೆಂಡ್ ವಿರುದ್ಧದ ತನ್ನ ಪ್ರಬಲ ಪ್ರದರ್ಶನಕ್ಕಾಗಿ ಪಾಕ್‌ ನ ಅಮೀನ್ ಪ್ರಶಸ್ತಿಯನ್ನು ಪಡೆದುಕೊಂಡರು.
ಸರಣಿಯಲ್ಲಿ 277 ರನ್‌ಗಳನ್ನು ಗಳಿಸಿದ್ದ ಆರಂಭಿಕ ಬ್ಯಾಟರ್ ಸಿದ್ರಾ ಕೇವಲ ಒಂದು ಬಾರಿ ಔಟಾಗಿದ್ದರು. ಜೊತೆಗೆ ಏಕದಿನದಲ್ಲಿ ತನ್ನ ಅತ್ಯಧಿಕ ಸ್ಕೋರ್‌  ಆದ 176 ರನ್ ಸಿಡಿಸಿ ಆತಿಥೇಯ ಪಾಕ್‌ ಗೆ ಮೊದಲ ಪಂದ್ಯದಲ್ಲಿ 128 ರನ್‌ಗಳ ಜಯವನ್ನು ತಂದುಕೊಟ್ಟಿದ್ದರು.
ಅವರು ಎರಡನೇ ODIನಲ್ಲಿ 93 ಎಸೆತಗಳಲ್ಲಿ 91 ರನ್ ಗಳಿಸಿ ಅಜೇಯ ಸ್ಕೋರ್ ಗಳಿಸುವ ಮೂಲಕ ಸರಣಿ ಗೆಲ್ಲಿಸಿಕೊಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!