ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ನಲ್ಲಿ, ಸ್ಫೋಟಕ ಯುವ ಬ್ಯಾಟ್ಸ್‌ಮನ್ ಜೋಶ್ ಬ್ರೌನ್ ಅದ್ಭುತ ಶತಕ ಗಳಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಓವಲ್ ನಲ್ಲಿ ಆಡಿದ ಪಂದ್ಯವು ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಬ್ರಿಸ್ಬೇನ್ ಹೀಟ್ ವಿರುದ್ಧ ಪೈಪೋಟಿ ನಡೆದಿದೆ. ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದ್ದ ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಬ್ರಿಸ್ಬೇನ್ ಹೀಟ್ ಬ್ಯಾಟಿಂಗ್ ಆಯ್ದುಕೊಂಡರು.
ಆರಂಭಿಕ ಜೋಶ್ ಬ್ರೌನ್ ಬ್ರಿಸ್ಬೇನ್ ಗೆ ಉತ್ತಮ ಆರಂಭ ನೀಡಿದರು ಮತ್ತು ನಾಯಕನಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಮೊದಲ ಓವರ್ನಿಂದ ಅಡಿಲೇಡ್ ಸ್ಟ್ರೈಕರ್ಸ್ ಬೌಲರ್ಗಳ ಬೆಂಡೆತ್ತಲಾರಂಭಿಸಿದ ಬ್ರೌನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದರು.
ಜೋಶ್ ಬ್ರೌನ್ ಈ ಪಂದ್ಯದಲ್ಲಿ 41 ಎಸೆತಗಳಲ್ಲಿ ಶತಕ ಗಳಿಸಿದರು ಮತ್ತು ಬಿಗ್ ಬ್ಯಾಷ್ ಲೀಗ್‌ನಲ್ಲಿ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಕ್ರೇಗ್ ಸಿಂಪ್ಸನ್ ಅಗ್ರಸ್ಥಾನದಲ್ಲಿದ್ದಾರೆ.
2014ರಲ್ಲಿ ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕಾಟ್ಸ್ ಪರ ಆಡಿದ ಸಿಮನ್ಸ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಕೇವಲ 39 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಇದೀಗ ಜೋಶ್ ಬ್ರೌನ್ ಸಿಡಿಸಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಕೇವಲ 41 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.