ಜೂ. 22ರಿಂದ 26 ರವರೆಗೆ ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ: ಎನ್.ರವಿಕುಮಾರ್ ಮಾಹಿತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಮತ್ತು ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷ ಪೂರ್ಣಗೊಳಿಸಿದ ಸಂದರ್ಭ ಬಿಜೆಪಿಯ 7 ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. ಜೂ. 22ರಂದು ಈ ಪ್ರವಾಸ ಆರಂಭವಾಗಲಿದೆ. 22ರಿಂದ 26ರ ಒಳಗೆ ರಾಜ್ಯದ ಪ್ರವಾಸ ಮುಕ್ತಾಯವಾಗಲಿದೆ ಎಂದು ಹೇಳಿದರು.

ಈ ಸಂದರ್ಭ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗಳು, ಇಡೀ ಜಗತ್ತೇ ಭಾರತದ ಕಡೆಗೆ ಒಂದು ಸಾರಿ ತಿರುಗಿ ನೋಡುವಂತೆ ಸಾಧನೆಗಳನ್ನು ಮಾಡಿದ್ದನ್ನು ತಿಳಿಸಲಾಗುವುದು. ಇಡೀ ದೇಶದಲ್ಲಿ ರಸ್ತೆಗಳ ಕ್ರಾಂತಿ ಆಗಿದೆ. ವಿಮಾನನಿಲ್ದಾಣಗಳ ನಿರ್ಮಾಣ ಆಗಿದೆ. ರೈತರ ಖಾತೆಗೆ 6 ಸಾವಿರ ರೂ. ಹಾಕುತ್ತಿರುವುದು, ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಒದಗಿಸಿರುವುದು, ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆದು ಬಡವರಿಗೆ ಆರೋಗ್ಯ ಸೌಕರ್ಯ ಒದಗಿಸಿದ್ದು, ಮೆಡಿಕಲ್ ಕಾಲೇಜು ಹೆಚ್ಚಿಸಿರುವುದು, ಮೆಡಿಕಲ್ ಸೀಟ್ ಹೆಚ್ಚಳ, ಐಐಟಿ, ಏಮ್ಸ್ ಸಂಸ್ಥೆಗಳನ್ನು ದೊಡ್ಡ ಸಂಖ್ಯೆಯಲ್ಲಿ ತೆರೆದಿರುವುದನ್ನು ತಿಳಿಸಲಿದ್ದೇವೆ ಎಂದು ತಿಳಿಸಿದರು.

ಸುಮಾರು 50 ಲಕ್ಷ ಮನೆಗಳಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು 9 ವರ್ಷಗಳಲ್ಲಿ ಮಾಡಿರುವಂತ ಸಾಧನೆಯ ಬಗೆಗಿನ ಕರಪತ್ರವನ್ನು ಹಂಚುವ ಮೂಲಕ ವಿನೂತನ ಅಭಿಯಾನವನ್ನು ಬಿಜೆಪಿ ನಾಯಕರು ರಾಜ್ಯಾಧ್ಯಂತ ನಡೆಸಲಿದ್ದಾರೆ.

ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪನವರ ತಂಡದಲ್ಲಿ ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ಪ್ರತಾಪಸಿಂಹ, ಪಿ.ಸಿ.ಮೋಹನ್, ಮುದ್ದುಹನುಮೇಗೌಡ, ಜಿ.ಎಸ್.ಬಸವರಾಜು, ಎಂ.ಪಿ.ರೇಣುಕಾಚಾರ್ಯ, ಮಾಧುಸ್ವಾಮಿ, ತೇಜಸ್ವಿ ಸೂರ್ಯ ಅವರು ಇರಲಿದ್ದಾರೆ. ಈ ತಂಡವು ದಾವಣಗೆರೆ, ಚಿತ್ರದುರ್ಗ, ಮಧುಗಿರಿ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ ಎಂದರು.

ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ತಂಡದಲ್ಲಿ ಶ್ರೀರಾಮುಲು, ಭಗವಂತ ಖೂಬಾ, ಎಂ.ಪಿ.ದೇವೇಂದ್ರಪ್ಪ, ರಾಜೂಗೌಡ, ಪಿ.ವಿ.ನಾಯಕ್, ಕರಡಿ ಸಂಗಣ್ಣ, ಎಂ.ಪಿ.ಪ್ರಕಾಶ್ ಅವರ ಮಗಳಾದ ಶ್ರೀಮತಿ ಎಂ.ಪಿ.ಸುಮಾ ವಿಜಯ್ ಇರುವರು. ಇವರು ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂಡದಲ್ಲಿ ರಮೇಶ್ ಜಿಗಜಿಣಗಿ, ಗದ್ದಿಗೌಡರ, ಮಂಗಳಾ ಸುರೇಶ್ ಅಂಗಡಿ, ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜು, ವೀರಣ್ಣ ಚರಂತಿಮಠ, ರಮೇಶ್ ಕತ್ತಿ ಭಾಗವಹಿಸುವರು. ವಿಜಯಪುರ, ಬಾಗಲಕೋಟೆ, ಬೆಳಗಾವಿ ನಗರ, ಗ್ರಾಮಾಂತರ ಮತ್ತು ಚಿಕ್ಕೋಡಿಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದು ವಿವರಿಸಿದರು.

ಆರ್.ಅಶೋಕ್ ಅವರ ತಂಡದಲ್ಲಿ ಪ್ರತಾಪಸಿಂಹ, ಎಸ್.ಟಿ.ಸೋಮಶೇಖರ್, ಕೆ.ಜಿ.ಬೋಪಯ್ಯ, ಎ.ಟಿ.ರಾಮಸ್ವಾಮಿ, ಪಿ.ಸಿ.ಮೋಹನ್, ಮುನಿಸ್ವಾಮಿ, ಪ್ರೀತಂಗೌಡ, ಅಪ್ಪಚ್ಚು ರಂಜನ್, ಮಂಜುನಾಥ್ ಅವರು ಪಾಲ್ಗೊಳ್ಳುವರು. ಇವರು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

ಡಿ.ವಿ.ಸದಾನಂದ ಗೌಡ ಮತ್ತು ವಿ.ಸೋಮಣ್ಣರವರ ನೇತೃತ್ವದ ಮತ್ತೊಂದು ತಂಡವು ಶೋಭಾ ಕರಂದ್ಲಾಜೆ, ಪ್ರತಾಪಸಿಂಹ, ಗೋಪಾಲಯ್ಯ, ಮಲ್ಲಿಕಾರ್ಜುನಪ್ಪ, ವಿಜಯಶಂಕರ್, ಶ್ರೀನಿವಾಸ ಪ್ರಸಾದ್ ನಿರಂಜನ್, ವತ್ಸ, ರಾಮದಾಸ್, ನಾಗೇಂದ್ರ ಇರುವರು. ಈ ತಂಡವು ಚಾಮರಾಜನಗರ, ಮೈಸೂರು, ಮೈಸೂರು ಗ್ರಾಮಾಂತರ, ಮಂಡ್ಯ- ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತದೆ ಎಂದು ವಿವರ ನೀಡಿದರು.

ಪ್ರಲ್ಹಾದ ಜೋಷಿ ಮತ್ತು ಸಿ.ಟಿ.ರವಿ ಅವರ ನೇತೃತ್ವದ ತಂಡವು ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್‍ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ವಿಜಯೇಂದ್ರ, ಪ್ರಮೋದ್ ಮಧ್ವರಾಜ್, ಬಿ.ವೈ.ವಿಜಯೇಂದ್ರ, ಶಿವರಾಮ ಹೆಬ್ಬಾರ್, ದಿನಕರ್ ಶೆಟ್ಟಿ, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್ ಅವರನ್ನು ಒಳಗೊಂಡಿರುತ್ತದೆ. ಇವರು ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರಕನ್ನಡ (2), ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ ಎಂದರು.

ಈಶ್ವರಪ್ಪನವರ ತಂಡದಲ್ಲಿ ಸಿ.ಎನ್.ಅಶ್ವತ್ಥನಾರಾಯಣ, ಶಿವಕುಮಾರ್ ಉದಾಸಿ, ಅರವಿಂದ ಬೆಲ್ಲದ, ಬಿ.ಸಿ.ಪಾಟೀಲ, ಸಂಗಣ್ಣ ಕರಡಿ, ಶಂಕರ ಪಾಟೀಲ ಮುನೇನಕೊಪ್ಪ, ಬಿ.ಸಿ.ಪಾಟೀಲ, ಶಿವರಾಜ್ ಸಜ್ಜನ್ ಇರುತ್ತಾರೆ. ಹಾವೇರಿ, ಹುಬ್ಬಳ್ಳಿ- ಧಾರವಾಡ, ಧಾರವಾಡ ಗ್ರಾಮಾಂತರ, ಗದಗ, ಕೊಪ್ಪಳಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!