ಭಾರತೀಯ ಕ್ರೀಡಾ ಲೋಕದ ದೈತ್ಯ ಸಂಸ್ಥೆ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಈಗ ಬೆಂಗಾಲ್ ಕ್ರಿಕೆಟ್‌ನತ್ತ ಹೆಜ್ಜೆ ಇಟ್ಟಿದೆ. ಬೆಂಗಾಲ್ ಪ್ರೊ ಟಿ20 ಲೀಗ್‌ನ ವಾಣಿಜ್ಯ, ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಯ ಸಂಪೂರ್ಣ ಜವಾಬ್ದಾರಿಯನ್ನು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಜೆಎಸ್‌ಡಬ್ಲ್ಯೂ ಸಂಸ್ಥೆಗೆ ವಹಿಸಿಕೊಟ್ಟಿದೆ. ಮುಂದಿನ ಮೂರು ವರ್ಷಗಳ ಕಾಲ ಈ ಒಪ್ಪಂದ ಜಾರಿಯಲ್ಲಿರಲಿದೆ.
ಲೀಗ್‌ನ ಮಾರ್ಕೆಟಿಂಗ್ ತಂತ್ರ, ಪ್ರಸಾರ ಉತ್ಪಾದನೆ ಮತ್ತು ಒಟ್ಟು ಕಾರ್ಯಾಚರಣೆಯನ್ನು ಜೆಎಸ್‌ಡಬ್ಲ್ಯೂ ಮುನ್ನಡೆಸಲಿದೆ.
ಸೀಸನ್ 3 ರ ಉದ್ಘಾಟನಾ ಸಮಾರಂಭದಲ್ಲಿ ಸೌರವ್ ಗಂಗೂಲಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಯಿತು.
ಈ ಬಾರಿ ‘ನೋವಸ್ ಪುರುಲಿಯಾ ರಾಯಲ್ಸ್’ 9ನೇ ತಂಡವಾಗಿ ಲೀಗ್ ಸೇರ್ಪಡೆಯಾಗಿದ್ದು, ಸ್ಪರ್ಧೆ ಮತ್ತಷ್ಟು ಕಳೆಗಟ್ಟಲಿದೆ.
ಸಮಾರಂಭದಲ್ಲಿ ಮೊಹಮ್ಮದ್ ಶಮಿ, ಅಜಿಂಕ್ಯ ರಹಾನೆ, ರಿಂಕು ಸಿಂಗ್ ಮತ್ತು ಜೂಲನ್ ಗೋಸ್ವಾಮಿ ಅಂತಹ ಸ್ಟಾರ್ ಆಟಗಾರರು ಪಾಲ್ಗೊಂಡು ಲೀಗ್‌ಗೆ ಬೆಂಬಲ ಸೂಚಿಸಿದರು.
ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಸಿಇಒ ದಿವ್ಯಾಂಶು ಸಿಂಗ್ ಮಾತನಾಡಿ, ಬೆಂಗಾಲ್‌ನ ಕ್ರಿಕೆಟ್ ಪರಂಪರೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೊಯ್ಯುವುದು ಮತ್ತು ಅಭಿಮಾನಿಗಳಿಗೆ ವಿಶ್ವದರ್ಜೆಯ ಅನುಭವ ನೀಡುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.



