July 26, 2026
Sunday, July 26, 2026
spot_img

ತಡರಾತ್ರಿ ಬಾವಿಗೆ ಬಿದ್ದ ಆನೆ ಉಳಿಸೋಕೆ ಬಿರುಸಿನ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ವರದಿ ಸುಳ್ಯ:

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚರ್ಪೆ ಎಂಬಲ್ಲಿ 20 ವರ್ಷದ ಆನೆಯೊಂದು ಸುಮಾರು 30 ಅಡಿ ಆಳದ ಬಾವಿಗೆ ತಡರಾತ್ರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬಿರುಸಿನಿಂದ ಕಾರ್ಯಾಚರಣೆ ನಡೆಯುತ್ತಿದೆ.

ರಾತ್ರಿ 12-ರಿಂದ 1 ಗಂಟೆಯ ಒಳಗೆ ಆನೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಹಿಟಾಚಿ ಯಂತ್ರದ ಮೂಲಕ ಮುಂಜಾನೆ 6 ರಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಅರಣ್ಯ ಇಲಾಖಾ ಅಧಿಕಾರಿಗಳು ಸುತ್ತಲು ಬಿಗಿ ಬಂದೋಬಸ್ಥ್ ಒದಗಿಸಿ ಕಂದಕ ಸೃಷ್ಟಿಸಿ ಆನೆಯನ್ನು ಹೊರಕ್ಕೆ ತರಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಿಸಿಎಫ್ ಕರಿಕಾಳನಂ, ಡಿಎಫ್ಒ ಆ್ಯಂಟೋನಿ ಮರಿಯಪ್ಪ,ಬೆಷನರಿ ಎಸಿಎಫ್ ಸಂಕೇತ್, ಎಸಿಎಫ್ ಪ್ರಶಾಂತ್ ಪೈ ,ಪುತ್ತೂರು ಅರಣ್ಯಾಧಿಕಾರಿ ಕಿರಣ್ ಬಿ.ಎಂ , ಪೋಲಿಸ್ ಉಪನಿರೀಕ್ಷಕ ಸಂತೋಷ್ ಬಿಪಿ , ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ ಅರಣ್ಯಾಧಿಕಾರಿಗಳ ದಂಡೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಆನೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !