ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ತಮ್ಮ ಪೂರ್ವಜರ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿರುವುದನ್ನು ವಿರೋಧಿಸಿ ಜೆಸಿಬಿಎದುರು ಉರುಳಾಡಿ ಸುಲ್ತಾನಪುರ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಎಡಿಜೆ) ಮನೋಜ್ ಶುಕ್ಲಾ ಅವರು , ಪ್ರತಿಭಟಿಸಿದ್ದು, ಇದೀಗ ಅವರ ಕರ್ತವ್ಯಕ್ಕೆ ಸಂಕಷ್ಟ ಎದುರಾಗಿದೆ.
ಬಸ್ತಿ ಜಿಲ್ಲೆಯ ಹರಯಾ ಪೊಲೀಸ್ ಠಾಣೆ ವ್ಯಾಪ್ತಿಯ ಛಾಪಿಯಾ ಶುಕ್ಲಾ ಗ್ರಾಮದಲ್ಲಿ ಕಾಲುವೆ ಅಗೆಯುವ ವೇಳೆ ಎಡಿಜೆ ಮನೋಜ್ ಶುಕ್ಲಾ ಅವರು ಜೆಸಿಬಿ ಎದುರು ಮಲಗಿ ಅಗೆಯುವ ಕಾಮಗಾರಿಯನ್ನು ವಿರೋಧಿಸಿದ್ದರು. ನ್ಯಾಯಾಧೀಶರ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಹೀಗಾಗಿ ಎಡಿಜೆ ಶುಕ್ಲಾ ಅವರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಆಡಳಿತ ಸಮಿತಿಯು ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಈ ಅಮಾನತು ಆದೇಶವನ್ನು ಸುಲ್ತಾನ್‌ಪುರ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ.
ನಾನು ನ್ಯಾಯಾಂಗ ಅಧಿಕಾರಿ, ಇದು ನನ್ನ ಪೂರ್ವಜರ ಭೂಮಿ. ನಮ್ಮ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಭೂ ಸ್ವಾಧೀನ ನಿಯಮಗಳಿಗೆ ವಿರುದ್ಧವಾಗಿದ್ದು, ಜಿಲ್ಲಾಧಿಕಾರಿ ನೀಡಿರುವ ಆದೇಶ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಎಡಿಜೆ ಮನೋಜ್ ಶುಕ್ಲಾ ಆರೋಪಿಸಿದ್ದಾರೆ.