ಕಾಲ್ತುಳಿತ ದುರಂತದ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಜೂ.​ 24 ಕೊನೆಯ ದಿನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವು ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್​ ಮೈಕಲ್​ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗವು ವಿಚಾರಣೆ ಚುರುಕುಗೊಳಿಸಿದೆ.

ಈ ನಿಟ್ಟಿನಲ್ಲಿ ದುರ್ಘಟನೆ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಜೂನ್ 4ರಂದು ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದರೆ ಹಾಗೂ 50ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದರು.

ರಾಜ್ಯ ಸರ್ಕಾರವು ಮ್ಯಾಜಿಸ್ಟ್ರೇಟ್, ಸಿಐಡಿ ಹಾಗೂ ನಿವೃತ್ತ ನ್ಯಾಯಾಧೀಶರಾದ ಕುನ್ನಾ ಅವರ ನೇತೃತ್ವದ ಆಯೋಗ ರಚಿಸಿದೆ. ಈ ಸಂಬಂಧ ಪ್ರತ್ಯೇಕ ತನಿಖೆ ನಡೆಸುತ್ತಿದೆ. ದುರ್ಘಟನೆ ವೇಳೆ ಘಟನೆಯ ವಾಸ್ತವಾಂಶದ ವಿವರಗಳು, ಮಾಹಿತಿ ಹಾಗೂ ಸತ್ಯ ಸಂಗತಿಗಳ ತಿಳಿದಿರುವ ಸಾರ್ವಜನಿಕರು ಆಯೋಗಕ್ಕೆ ತಿಳಿಸಬಹುದಾಗಿದೆ.

ತನಿಖಾ ಆಯೋಗಕ್ಕೆ ಹೇಳಿಕೆ ನೀಡಲು ಹಾಗೂ ಸಾಕ್ಷ್ಯ ದಾಖಲೆಗಳನ್ನು ಒದಗಿಸಲು ಇಚ್ಛಿಸುವವರು ಎರಡು ಪ್ರತಿಗಳಲ್ಲಿ ದೃಢೀಕೃತ ಪ್ರಮಾಣ ಪತ್ರದೊಂದಿಗೆ ಸಲ್ಲಿಸಬಹುದಾಗಿದೆ. ಜೂನ್ 24ರ ಒಳಗೆ ಸಹಿ ಮಾಡಿದ ಹಾಗೂ ಸ್ಕ್ಯಾನ್ ಮಾಡಿದ ಪ್ರಮಾಣಪತ್ರ ಹಾಗೂ ದಾಖಲೆಗಳೊಂದಿಗೆ [email protected] ಕಳುಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!