ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್ನ ಕಾರ್ಯಕ್ರಮವೊಂದರಲ್ಲಿ ನಟ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು,ಇದರಿಂದ ನಟ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.
ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಜೂನಿಯರ್ ಎನ್ಟಿಆರ್, ತಮ್ಮ ಆರ್ಆರ್ಆರ್ ಸಹನಟ ರಾಮ್ ಚರಣ್ ಮತ್ತು ನಿರ್ದೇಶಕ ಎಸ್ಎಸ್ ರಾಜಮೌಳಿ ಅವರೊಂದಿಗೆ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದಿಂದ ಲೈವ್ ಆರ್ಕೆಸ್ಟ್ರಾ ಪ್ರದರ್ಶನವೂ ಇತ್ತು. ಜೂನಿಯರ್ ಎನ್ಟಿಆರ್ ಅವರ ಪ್ರವೇಶ ದೃಶ್ಯದಲ್ಲಿ ಮತ್ತು ಆರ್ಆರ್ಆರ್ ತಂಡದ ನಿರ್ದೇಶಕ ರಾಜಮೌಳಿ ಅವರನ್ನು ನೋಡಿದಾಗ ಅಭಿಮಾನಿಗಳು ಹರ್ಷೋದ್ಗಾರಗಳು, ಕಿರುಚಾಟಗಳು ಮತ್ತು ಶಿಳ್ಳೆ ಹಾಕಿದ್ದಾರೆ.
ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ಗದ್ದಲ ಎಬ್ಬಿಸಿದಾಗ, ನಟ ಅವರ ಮೇಲೆ ಕೋಪಗೊಂಡು, ನಾನು ನಿಮಗೆ ಸೆಲ್ಫಿ ಕೊಡುತ್ತೇನೆ ಆದರೆ ನೀವು ಕಾಯಬೇಕು. ನೀವು ಈ ರೀತಿ ವರ್ತಿಸಿದರೆ, ಭದ್ರತಾ ಸಿಬ್ಬಂದಿ ನಿಮ್ಮನ್ನು ಹೊರಗೆ ಹಾಕುತ್ತಾರೆ ಎಂದು ಹೇಳಿದ್ದಾರೆ.
ಆದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅಭಿಮಾನಿಗಳು ಇರಲಿಲ್ಲ. ಅದರಿಂದ ಕೋಪಗೊಂಡ ಜೂನಿಯರ್ ಎನ್ಟಿಆರ್ ಅಲ್ಲಿಂದ ಹೊರಟು ಹೋಗಿದ್ದಾರೆ.