ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್ ಟವರ್ ಏರಿ ಕುಳಿತ ಭೂಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಈ ಕ್ಷಣ ವ್ಯಕ್ತಿಯೊಬ್ಬರು ಪ್ಯಾರಿಸ್​​ನ ಐತಿಹಾಸಿಕ ಐಫೆಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದಾನೆ. ವ್ಯ

ಕ್ತಿಯೊಬ್ಬ ಏರುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ತಕ್ಷಣವೇ ಜಾಗೃತರಾಗಿದ್ದು, ಆತನನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.

ಅಂಗಿ ಧರಿಸದೇ ಕೇವಲ ಶಾರ್ಟ್​​ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ 330 ಮೀಟರ್ ಎತ್ತರದ ಗೋಪುರ ಏರುತ್ತಿರುವುದು ಕಂಡುಬಂದಿದೆ. ಆತ ಯಾವಾಗ ಮತ್ತು ಎಲ್ಲಿಂದ ತಮ್ಮ ಏರಲು ಪ್ರಾರಂಭಿಸಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟವರ್​ ಮೇಲೆ ಅಳವಡಿಸಲಾಗಿದ್ದ ರಿಂಗ್​ ಮೇಲೆ ಆತನ ಚಹರೆ ಕಂಡುಬಂದಾಗ ಅಧಿಕಾರಿಗಳು ಆತನನ್ನು ಸ್ಥಳಾಂತರ ಮಾಡಿದರು.

https://x.com/kevinwinston/status/1822621546344567027?ref_src=twsrc%5Etfw%7Ctwcamp%5Etweetembed%7Ctwterm%5E1822621546344567027%7Ctwgr%5E89f1e819cc4fac567a347a243265873b691bbc3c%7Ctwcon%5Es1_&ref_url=https%3A%2F%2Fvistaranews.com%2Fsports%2Fparis-olympics-2024-man-climbs-eiffel-tower-hours-before-closing-ceremony%2F713310.html

ಐಫೆಲ್ ಟವರ್​ನ ಮೇಲೆ ವ್ಯಕ್ತಿಯನ್ನು ಗುರುತಿಸಿದ ನಂತರ, ಪೊಲೀಸರು ಈ ಪ್ರದೇಶವನ್ನು ಸುತ್ತುವರಿದರು.ಎರಡನೇ ಮಹಡಿಯಲ್ಲಿ ಸ್ವಲ್ಪ ಸಮಯದವರೆಗೆ ಪ್ರವಾಸಿಗರು ಹಾಗೆಯೇ ನಿಲ್ಲುಂತಾಯಿತು. ಇನ್ನೂ ಕೆಲವರಿಗೆ ಸುಮಾರು 30 ನಿಮಿಷಗಳ ನಂತರ ನಿರ್ಗಮಿಸಲು ಅವಕಾಶ ನೀಡಲಾಯಿತು.

ಪ್ಯಾರಿಸ್​​ನ ಹೃದಯಭಾಗದಲ್ಲಿರುವ ಐತಿಹಾಸಿಕ ಗೋಪುರವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದ ಕೇಂದ್ರಬಿಂದುವಾಗಿತ್ತು. ಆದಾಗ್ಯೂ, ಇದು ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭ ಅದರ ಸಮೀಪ ನಡೆಯುವುದಿಲ್ಲ. 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕಾಗಿ ಪ್ಯಾರಿಸ್​ನಲ್ಲಿ 30,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಒಲಿಂಪಿಕ್ಸ್​​ನ ಕೊನೆಯ ದಿನದಂದು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾರಿಸ್ ಮತ್ತು ಸೇಂಟ್-ಡೆನಿಸ್ ಪ್ರದೇಶದಲ್ಲಿ 20,000 ಪೊಲೀಸ್ ಪಡೆಗಳು ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ಭಾನುವಾರ ತಡರಾತ್ರಿಯವರೆಗೆ ಸಜ್ಜುಗೊಳಿಸಲಾಗುವುದು ಎಂದು ಫ್ರಾನ್ಸ್​​ನ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭವು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಆಗಸ್ಟ್ 12 ರಂದು ಬೆಳಿಗ್ಗೆ 12.30) ಐಫೆಲ್ ಟವರ್​ನಲ್ಲಿ ನಡೆಯಲಿದೆ. ಸೇಂಟ್-ಡೆನಿಸ್ ಪ್ರದೇಶದ ಸ್ಟೇಡ್ ಡಿ ಫ್ರಾನ್ಸ್ನಲ್ಲಿ ಪ್ರಾರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!