ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ತಡೆಹಿಡಿಯಲಾಗಿತ್ತು.
ಇದನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ಮುರಿದಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ನಾವು ಬ್ಯಾರಿಕೇಡ್ಗಳನ್ನು ಮುರಿದಿದ್ದೀವಿ ಆದರೆ ಕಾನೂನನ್ನು ಮುರಿದಿಲ್ಲ. ಎಲ್ಲಾ ಕಡೆಗೂ ಬ್ಯಾರಿಕೇಡ್ ಹಾಕಿ ನಮ್ಮನ್ನು ತಡೆದ ಕಾರಣ ಹೀಗೆ ಮಾಡಬೇಕಾಯ್ತು ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ಇದೇ ಮಾರ್ಗದಲ್ಲಿ ಸಾಗಿದ್ದಾರೆ, ಅವರಿಗೆ ಇರುವ ಅವಕಾಶಾ ನಮಗೆ ಯಾಕಿಲ್ಲ? ನಾವು ದುರ್ಬಲರಲ್ಲ. ಬ್ಯಾರಿಕೇಡ್ ಮುರಿದಿದ್ದೀವಿ, ಕಾನೂನಲ್ಲ ಎಂದು ಒತ್ತಿ ಹೇಳಿದ್ದಾರೆ.