ಹೊಸದಿಗಂತ ವಿಜಯಪುರ:
ಕದನ ಆರಂಭ ಮಾಡಿದ್ದೇವು, ಆ ಗುರಿ ಇಡೇರಿತಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕದನ ಘೋಷಣೆ ಮಾಡಿದಾಗ ನಮ್ಮ ಸಂಪೂರ್ಣ ಬೆಂಬಲ ಕೊಟ್ಟಿದ್ದೇವು. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕು. ಇನ್ನೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು, ಹಾಗೆ ಪಾಠ ಕಲಿಸಬೇಕು ಎಂದು ಬೆಂಬಲಿಸಿದ್ದೇವು. ಆ ಪಾಠ ಇಡೇರಿತಾ ? ಎಂದರು.
ಮೂರ್ನಾಲ್ಕು ದಿನ ಪ್ರಯತ್ನ ಮಾಡಿ ಅಲ್ಲಿಗೆ ಬಿಟ್ಟರೆ, ಪಾಕಿಸ್ತಾನಕ್ಕೆ ಇನ್ನಷ್ಟು ಇಂಬು ಕೊಟ್ಟಂಗಾಗುತ್ತದೆ ಎಂಬುದು ಅನುಮಾನ ಹುಟ್ಟಲು ಶುರುವಾಗುತ್ತೆ. ಸ್ಪಷ್ಟವಾದ ಉತ್ತರ ಇಲ್ಲದ ಪ್ರಶ್ನೆ ಎಂದರೆ ನಾವು ಕದನ ಮಾಡುವುದು ಸರಿ. ನಮ್ಮ ಆಂತರಿಕ ವಿಚಾರದಲ್ಲಿ ಬೆರಳು ತೋರಿಸುತ್ತಾರೆ. ಅಮರಿಕದವರು ಹೇಳಿದರಂತೇಳಿ ಯುದ್ದ ನಿಲ್ಲಿಸುವುದಾ ?, ಅಮರಿಕ ನಮ್ಮ ಆಂತರಿಕ ವಿಚಾರ ತೀರ್ಮಾನ ಮಾಡುವುದಾದರೆ. ನಮ್ಮ ಸಾರ್ವಭೌಮತ್ವದ ವಿಷಯ ಏನು ? ಎಂದರು.
ಕಾಶ್ಮೀರದ ವಿಚಾರದಲ್ಲಿ ಅಮರಿಕದವರು ಮಧ್ಯಸ್ಥಿಕೆ ವಹಿಸುತ್ತೇವೆ ಅಂತಾರೆ. ಇದಕ್ಕಿಂತ ಭಾರತಕ್ಕೆ ದೊಡ್ಡ ಹಿನ್ನೆಡೆಯಿಲ್ಲ. ಇದು ಆಂತರಿಕ ವಿಚಾರ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಬೇರೆ ದೇಶದವರು ಬಂದು ನಮ್ಮಆಂತರಿಕ ವಿಚಾರದಲ್ಲಿ ನ್ಯಾಯ ಪಂಚಾಯಿತಿ ಮಾಡುವುದು ಅಲ್ಲಿಗೆ ಕಾಶ್ಮೀರ ಸಮಸ್ಯೆ ಮುಗಿಯಿತಾ ಅಥವಾ ಮರಳಿ ಆರಂಭವಾಯಿತಾ ?, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಂದಗೆ ಆಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ಉತ್ತರ ಕೊಡಬೇಕು ಎಂದರು.