ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡ್ ಪರ್ಚೇಸ್ ಮಾಡೋ ಐಡಿಯಾ ಇದ್ರೆ ಬಿಟ್ಬಿಡಿ. ಇನ್ನು ಗೋಲ್ಡ್ ಬರೀ ಕಿಟಕಿಯಿಂದ ನೋಡಿ ಖುಷಿಪಡ್ಬೇಕಷ್ಟೆ. ಯಾಕಂದ್ರೆ ಬಂಗಾರ ಮುಟ್ಟೋಕಾಗದಷ್ಟು ದುಬಾರಿಯಾಗಿದೆ.
ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ ರೂ. 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ. ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್‌ಗೆ $3,000 ದಾಟಿದ ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರಿವೆ.
ಮದುವೆ ಸೀಸನ್ ಈಗಾಗಲೇ ಪ್ರಾರಂಭವಾಗಿರುವುದರ ನಡುವೆಯೇ ಚಿನ್ನದ ಬೆಲೆ ಏರುಗತಿಯಲ್ಲಿದ್ದು, ಬೇಡಿಕೆ ಮರಳುತ್ತದೆಯೇ ಎಂದು ಆಭರಣ ಉದ್ಯಮ ಚರ್ಚಿಸುತ್ತಿದೆ. ಪ್ರಸ್ತುತ ಹೆಚ್ಚಿನ ಬೆಲೆಗಳಲ್ಲಿ, ಪರಿಮಾಣದ ದೃಷ್ಟಿಯಿಂದ ಚಿನ್ನದ ಅತಿದೊಡ್ಡ ಖರೀದಿದಾರ ಸಮುದಾಯವಾಗಿರುವ ಕಡಿಮೆ ಮತ್ತು ಮಧ್ಯಮ-ಆದಾಯದ ಜನರಿಗೆ, ಚಿನ್ನ ಕೈಗೆಟುಕುವಂತಿಲ್ಲ ಎನ್ನಲಾಗಿದೆ.