ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಹಮಾಸ್, ಹೌಥಿಸ್ ಸೇರಿದಂತೆ ಹಲವು ಉಗ್ರರ ವಿರುದ್ಧ ಹೋರಾಡುತ್ತಿದ್ದು. ಇದರ ನಡುವೆ ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ತೆರಳಿದ ವಿಮಾನ ಇನ್ನೇನು ಲ್ಯಾಂಡಿಂಗ್‌ಗೆ ಕೆಲ ಕ್ಷಣಗಳು ಬಾಕಿ ಇರುವಂತೆ ಮಿಸೈಲ್ ದಾಳಿ ನಡೆದಿದೆ. ಇದರ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೇಡೆಗೆ ಡೈವರ್ಟ್ ಮಾಡಿ ಸೇಫ್ ಆಗಿದೆ.
ದೆಹಲಿಯಿಂದ ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೆ ತೆರಳಿದ ಏರ್ ಇಂಡಿಯಾ ವಿಮಾನ ಲ್ಯಾಡಿಂಗ್ ಮುನ್ನ ಇಸ್ರೇಲ್ ಮೇಲೆ ಹೌಥಿಸ್ ಉಗ್ರರು ದಾಳಿ ಮಾಡಿದ್ದಾರೆ. ಇದರ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೇಡೆಗೆ ಮಾರ್ಗ ಬದಲಾಯಿಸಿದೆ.
ಏರ್ ಇಂಡಿಯಾ ವಿಮಾನ ಜೋರ್ಡನ್ ದೇಶದ ವಾಯು ಪ್ರದೇಶ ದಾಟಿ ಇಸ್ರೇಲ್‌ನತ್ತ ತೆರಳುತ್ತಿದ್ದಂತೆ ಹೌಥಿಸ್ ಉಗ್ರರು ಇಸ್ರೇಲ್‌ನ ಟೆಲ್ ಅವೀವ್ ಸಮೀಪದ ಬೆಲ್ ಗುರಿಯಾನ್ ವಿಮಾನ ನಿಲ್ದಾಣ ಪಕ್ಕದಲ್ಲಿ ಮಿಸೈಲ್ ದಾಳಿ ನಡೆಸಿದ್ದಾರೆ.
ಹೀಗಾಗಿ ಇಸ್ರೇಲ್‌ನಲ್ಲಿ ಅದರಲ್ಲೂ ಪ್ರಮುಖವಾಗಿ ಟೆಲ್ ಅವೀವ್ ಸೇರಿದಂತೆ ಕೆಲೆವೆಡೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.ಹೀಗಾಗಿ ತಕ್ಷಣವೇ ಭಾರತದ ಏರ್ ಇಂಡಿಯಾ ವಿಮಾನಕ್ಕೆ ಸೂಚನೆ ನೀಡಲಾಗಿದೆ.
ಅಬು ಧಾಬಿಯಲ್ಲಿ ವಿಮಾನ ಲ್ಯಾಂಡಿಂಗ್
ಇಸ್ರೇಲ್ ಪರಿಸ್ಥಿತಿ ಭೀಕರವಾಗಿದ್ದ ಕಾರಣ ಏರ್ ಇಂಡಿಯಾ ವಿಮಾನಕ್ಕೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ಭಾರತದ ವಿಮಾನಯಾನ ಕಂಟ್ರೋಲ್ ರೂಂ ಅಬು ಧಾಬಿ ಸಂಪರ್ಕಿಸಿ ಮಾಹಿತಿ ನೀಡಿದೆ. ಬಳಿಕ ಏರ್ ಇಂಡಿಯಾ ವಿಮಾನವನ್ನು ಅಬುಧಾಪಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಂತೆ ಜೋರ್ಡಾನ್ ವಾಯು ಪ್ರದೇಶದಿಂದ ಭಾರತದ ಏರ್ ಇಂಡಿಯಾ ವಿಮಾನ ನೇರವಾಗಿ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿತ್ತು. ಟೆಲ್ ಅವೀವ್‌ಗೆ ಸದ್ಯಕ್ಕೆ ಪ್ರಯಾಣ ಬೆಳೆಸುವಂತಿಲ್ಲ. ಹೀಗಾಗಿ ಏರ್ ಇಂಡಿಯಾ ವಿಮಾನ ಅಬುಧಾಬಿನಿಂದ ದೆಹಲಿಗೆ ಮರಳಿದೆ.