ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಹ್ಯಾಲೋವೀನ್ ಆಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಖ್ಯಾತ ಗಾಯಕ ಮತ್ತು ನಟ ಲೀ ಜಿಹಾನ್ (24) ನಿಧನರಾಗಿದ್ದಾರೆ.
ಲೀ ಜಿಹಾನ್ ಏಜೆನ್ಸಿ 935 ಎಂಟರ್ಟೈನ್ಮೆಂಟ್ ನ ಪ್ರಮುಖ ಭಾಗವಾಗಿದ್ದರು. ಸಂಸ್ಥೆಯು ದುಃಖದ ಸುದ್ದಿಯನ್ನು ದೃಢಪಡಿಸಿದೆ.
ಸುದ್ದಿಯನ್ನು ಕೇಳಿ ನಮಗೆ ತುಂಬಾ ಆಘಾತವಾಗಿದೆ. ಅವರ ಕುಟುಂಬವು ಇದೀಗ ಅಪಾರ ದುಃಖವನ್ನು ಅನುಭವಿಸುತ್ತಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುತ್ತೇವೆʼ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಲೀ ಜಿಹಾನ್ ಪಾರ್ಕ್ ಹೀಸೋಕ್, ಜೋ ಜಿನ್ಹ್ಯುಂಗ್ ಮತ್ತು ಕಿಮ್ ಡೊಹ್ಯುನ್ ಮೊದಲಾದ ಖ್ಯಾತ ಕಾರ್ಯಕ್ರಮಗಳ ಭಾಗವಾಗಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ