ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯ ಗುಪ್ತವಾರ್ತೆಯ ಉಪ ಪೊಲೀಸ್ ಮಹಾ ನಿರ್ದೇಕರಾದ ಕೆ. ಸಂತೋಷ ಬಾಬು ಅವರಿಗೆ ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಈ ಹಿಂದೆ ಕಮಿಷನರ್ ಆಗಿದ್ದ ರಮನ್ ಗುಪ್ತಾ ಅವರನ್ನು ವರ್ಗಾವಣೆ ಮಾಡಿದ ನಂತರ, ತೆರವಾದ ಸ್ಥಾನಕ್ಕೆ ಎಂಟು ದಿನವಾದರೂ ಯಾರನ್ನೂ ನೇಮಿಸಿರಲಿಲ್ಲ. ಬುಧವಾರ ತಡರಾತ್ರಿ ಕೆ.ಸಂತೋಷ ಬಾಬು ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. 2011ನೇ ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಗುರುವಾರ ಬೆಳಿಗ್ಗೆಯೇ ಅಧಿಕಾರ ಸ್ವೀಕರಿಸಿದ ನೂತನ ಕಮಿಷನರ್ ಕೆ. ಸಂತೋಷ ಬಾಬು ಅವರು, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಮೇಲ್ ಮಹಡಿಯಲ್ಲಿರುವ ಉತ್ತರ ವಿಭಾಗದ ಎಸಿಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಾಂಕೇತಿಕ ಸಭೆ ನಡೆಸಿದರು. ಬಕ್ರೀದ್ ಅಂಗವಾಗಿ ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.