ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬಿನಿ ಜಲಾಶಯದ ಒಳ ಹರಿವು ಹೆಚ್ಚಾದ ಹಿನ್ನೆಲೆ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಿರುವ ಪರಿಣಾಮ ಭತ್ತದ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ.
ವಯನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾದ ಪರಿಣಾಮ ಹೆಚ್ಡಿ ಕೋಟೆಯ ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದ್ದು, ಭತ್ತದ ಬೆಳೆ ನಾಶವಾಗಿದೆ.
ಬೊಕ್ಕಹಳ್ಳಿ ಹದಿನಾರು ಮೂಡಹಳ್ಳಿ, ಅಲತ್ತೂರು, ನಗರ್ಲೆ, ಕುಪ್ಪರವಳ್ಳಿ, ಹೊಸಕೋಟೆ, ಸುತ್ತೂರು, ಬೀಳುಗಲಿ, ತಾಯೂರು, ಹಾರೋಪುರ ಗ್ರಾಮಗಳಲ್ಲಿ ಬೆಳೆ ನಾಶ ಉಂಟಾಗಿದೆ.