‘ಕೈ’​​​ ಪ್ರಣಾಳಿಕೆಯಲ್ಲಿ ದೇವಾಲಯದ ಚಿನ್ನ, ಮಹಿಳೆಯರ ಮಂಗಲಸೂತ್ರದ ಮೇಲೆ ಕಣ್ಣಿಟ್ಟಿದೆ: ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 17) ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಆಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು “ಮಾವೋವಾದಿ” ದಾಖಲೆ ಎಂದು ಹೇಳಿದ್ದಾರೆ.

ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಜಾರಿಗೊಳಿಸಿದರೆ ದೇಶ ದಿವಾಳಿಯಾಗಲಿದೆ ಎಂದು ಎಚ್ಚರಿಸಿದರು. ಮಹಾತ್ಮ ಗಾಂಧೀಜಿ ಬಯಸಿದಂತೆ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಿದ್ದರೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಇಂದು ಇರುವ ಸ್ಥಿತಿಗಿಂತ ಐದು ದಶಕಗಳಷ್ಟು ಮುಂದಿರುತ್ತಿತ್ತು ಎಂದು ಹೇಳಿದರು.

ಕಾಂಗ್ರೆಸ್ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ತನ್ನನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದು. ಈ ಮಾವೋವಾದಿ ಪ್ರಣಾಳಿಕೆಯು ದೇವಾಲಯ ಮತ್ತು ಮಹಿಳೆಯರ ‘ಮಂಗಲಸೂತ್ರ’ ಚಿನ್ನದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಿದರು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಮುದ್ರೆ ಇದೆ ಎಂದು ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. 70 varshadindae irada problems iga 10 varshglinda nodta iddivi yella bele galu jasthi bangranantu namanta badavaru adanna nodoke saha agolla nivu hattu varshadindae yen madta iddri belegalanna yake kammi madabharadittu hindutva hindutva anta yella jaasthi madkond hogta iddira janglige besara agade aadlita kottiddre iga ige yake agta ittu .

LEAVE A REPLY

Please enter your comment!
Please enter your name here

error: Content is protected !!