ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಕ್ಯೂಟ್ ಜೋಡಿ ಅಜಯ್ ದೇವಗನ್ ಹಾಗೂ ಕಾಜೋಲ್ ಪ್ರೀತಿಸಿ ಮದುವೆಯಾದವರು. ಇವರ ಮದುವೆ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.. ಕಾಜೋಲ್ ಅಜಯ್‌ರನ್ನು ಮದುವೆಯಾಗೋಕೂ ಮುನ್ನ ಈ ಕಂಡೀಷನ್ ಹಾಕಿದ್ರಂತೆ..
ಅಜಯ್ ದೇವಗನ್ ಮತ್ತು ಕಾಜೋಲ್ ‘ಪ್ಯಾರ್ ತೋ ಹೋನಾ ಹಿ ಥಾ’ ಚಿತ್ರದ ಶೂಟ್ನಲ್ಲಿ ಇದ್ದರು. ಆ ಸಮಯದಲ್ಲಿ ಅಜಯ್ ಅವರು ಕಾಜೋಲ್ ಎದುರು ಮದುವೆಗೆ ಪ್ರಸ್ತಾಪ ಇಟ್ಟರು. ಆ ವೇಳೆ ಕಾಜೋಲ್ ಅಜಯ್ ಮುಂದೆ ವಿಶಿಷ್ಟವಾದ ಷರತ್ತನ್ನು ಹಾಕಿದ್ದರು.
‘ಈ ಚಿತ್ರ ಹಿಟ್ ಆದಲ್ಲಿ ಮದುವೆ ಆಗುತ್ತೇನೆ ಇಲ್ಲವಾದರೆ ಮತ್ತೆಂದೂ ಈ ಬಗ್ಗೆ ಮಾತನಾಡುವುದಿಲ್ಲ’ ಎಂದು ಹೇಳಿದ್ದರು ಅವರು. ಕಾಜೋಲ್ ಈ ಷರತ್ತನ್ನು ಅಜಯ್ ದೇವಗನ್ ಒಪ್ಪಿಕೊಂಡಿದ್ದರು. ಅದೃಷ್ಟವಶಾತ್, ಚಿತ್ರವು ಸೂಪರ್ ಹಿಟ್ ಆಯಿತು ಮತ್ತು ಅಜಯ್-ಕಾಜೋಲ್ 24 ಫೆಬ್ರವರಿ 1999ರಂದು ವಿವಾಹವಾದರು.