March 31, 2026
Tuesday, March 31, 2026
spot_img

ದಾಖಲೆ ಬರಿತಿದೆ ಕಾಜೋಲ್–ಟ್ವಿಂಕಲ್ ಟಾಕ್ ಶೋ: ಈ ಬಗ್ಗೆ ಪ್ರೈಮ್ ವಿಡಿಯೋ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಟಿಟಿ ಪ್ರೇಕ್ಷಕರ ಮನ ಸೆಳೆದಿರುವ ಹೊಸ ಟಾಕ್ ಶೋ, ಯಶಸ್ಸಿನ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಪ್ರಸಾರವಾಗುತ್ತಿರುವ ‘ಟು ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್’ ಶೋ ಭಾರತದಲ್ಲಿ ಭಾರೀ ವೀಕ್ಷಣೆಯನ್ನು ದಾಖಲಿಸಿಕೊಂಡಿದ್ದು, ಇದು ದೇಶದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಅನ್ಸ್ಕ್ರಿಪ್ಟೆಡ್ ಶೋ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಶೋ ಆರಂಭವಾದ ಕೆಲವೇ ದಿನಗಳಲ್ಲಿ ಶೇಕಡಾ 93ರಷ್ಟು ರೀಚ್ ಸಾಧಿಸಿರುವುದು ಒಟಿಟಿ ವಲಯದಲ್ಲೇ ಅಚ್ಚರಿ ಮೂಡಿಸಿದೆ ಎಂದು ಅಮೆಜಾನ್ ಪ್ರೈಮ್ ಹೇಳಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದು, ಮುಕ್ತ ಸಂಭಾಷಣೆ, ನೇರ ಮಾತು ಮತ್ತು ನಗುವಿನ ಕ್ಷಣಗಳು ವೀಕ್ಷಕರನ್ನು ಆಕರ್ಷಿಸಿವೆ ಎಂದು ಹೇಳಿದೆ.

ಈ ಹಿಂದೆ ಜಾಹ್ನವಿ ಕಪೂರ್ ಹಾಗೂ ಕರಣ್ ಜೋಹರ್ ಭಾಗವಹಿಸಿದ ಎಪಿಸೋಡ್ ವೇಳೆ ಕೆಲವು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೂ ಕಾರಣವಾಗಿತ್ತು. ಶೋ ಹೋಸ್ಟ್‌ಗಳಾದ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಮುಕ್ತ ಮನಸ್ಸಿನಿಂದಲೇ ಅತಿಥಿಗಳನ್ನು ಮಾತನಾಡಿಸುವ ಶೈಲಿ ಈ ಕಾರ್ಯಕ್ರಮದ ದೊಡ್ಡ ಶಕ್ತಿಯಾಗಿದೆ. ಕೆಲ ವಿಚಾರಗಳಲ್ಲಿ ಟ್ರೋಲ್‌ಗಳಿಗೂ ಗುರಿಯಾದರೂ, ಒಟ್ಟಾರೆ ಈ ಶೋ ಪ್ರೇಕ್ಷಕರ ಮೆಚ್ಚುಗೆ ಪಡೆದು ಭರ್ಜರಿ ಯಶಸ್ಸು ಕಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !