ಹೊಸದಿಗಂತ ವರದಿ ಕಲಬುರಗಿ:
ಡಾ.ಬಾಬಾ ಅಂಬೇಡ್ಕರ್ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಖಂಡಿಸಿ ದಲಿತ ಸಂಘಟನೆಗಳು, ವಿವಿಧ ಸಮುದಾಯಗಳ ನೇತೃತ್ವದಲ್ಲಿ ಕಲಬುರಗಿ ಬಂದ್ ಕರೆ ನೀಡಲಾಗಿದ್ದು,ಬಂದ್ ಸಂದರ್ಭದಲ್ಲಿ ಹೋರಾಟಗಾ ಲಾರಿಯ ಗ್ಲಾಸ್ ಗೆ ಬಡಿಗೆಗಳಿಂದ ಹೊಡೆದು ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಹೊರವಲಯದ ಬೇಲೂರು ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಕಲಬುರಗಿ ಬಂದ್ ಇದ್ದರು,ರಸ್ತೆಗೆ ಬರುತ್ತಿರಾ ಎಂದು ಲಾರಿ ಚಾಲುನಿಗೆ ಆವಾಜ್ ಹಾಕಿ,ಲಾರಿಯ ಗ್ಲಾಸ್,ಗೆ ಬಡಿಗೆಗಳಿಂದ ಹೊಡೆದು ಪ್ರತಿಭಟನಾಕಾರರು ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ.
ಕಲಬುರಗಿ ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ವಾಹನ ಸವಾರರ ಪರದಾಟ ನಡೆದಿದ್ದು, ಸಾರ್ವಜನಿಕರು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಲಬುರಗಿಯ ಸಬ್ ಅರ್ಬನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.