ಹೊಸದಿಗಂತ ಕಲಬುರಗಿ:
ಕಲಬುರಗಿಯನ್ನು ರಿಪಬ್ಲಿಕ್ ಕಲಬುರಗಿಯನ್ನಾಗಿ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಸಾಂವಿಧಾನಿಕ ಹುದ್ದೆಯಲ್ಲಿರುವ ವಿಪಕ್ಷ ನಾಯಕನಿಗೆ ಅಗೌರವ ತೋರಿದ್ದು ಖಂಡನೀಯ. ಸಂವಿಧಾನದ ಪುಸ್ತಕವನ್ನು ಕೇವಲ ಕೈಯಲ್ಲಿ ಹಿಡಿದುಕೊಂಡು ಓಡಾಡುವುದನ್ನು ಬಿಟ್ಟು ಅದರ ಪಾಲನೆ ಕೂಡ ಆಗಲಿ ಎಂದು ಹೇಳಿದರು.
ಅಧಿಕಾರದ ದರ್ಪದಲ್ಲಿ ಮೆರೆಯುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ,ನಿಮ್ಮ ಅಧಿಕಾರದ ದರ್ಪ ದೌರ್ಜನ್ಯ ಭೀತಿ ಮೀರಿದೆ. ನಿಮ್ಮ ಕ್ರೆಡಿಬಿಲಿಟಿ ತಕ್ಕಂತೆ ಮಾತನಾಡಿ. ಸಂವಿಧಾನ , ಪ್ರಜಾಪ್ರಭುತ್ವ ಎಂಬ ನಾಟಕೀಯ ಮಾತುಗಳನ್ನು ಬಿಟ್ಟು ಬಿಡಿ ಎಂದರು.