ಕಲಬುರಗಿ: ಡಿ. 4 ರಂದು ವಿಹಿಂಪದಿಂದ ಬೃಹತ್ ಸಂಕೀರ್ತನಾ ಮೆರವಣಿಗೆ

ಹೊಸದಿಗಂತ ವರದಿ, ಕಲಬುರಗಿ:
ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಲಬುರಗಿ ವಿಭಾಗದ ವತಿಯಿಂದ ಡಿ.4ರಂದು ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಬೃಹತ್ ಸಂಕೀರ್ತನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾಯ೯ದಶಿ೯ ಶಿವರಾಜ್ ಸಂಗೋಳಗಿ ತಿಳಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಷಣ್ಮುಖ ಶಿವಯೋಗಿ ಮಠದಿಂದ ಶ್ರೀ ಬಸವೇಶ್ವರರ ವೃತ್ತ ಬಿಜಾಪುರ ರಸ್ತೆವರೆಗೂ ನಂತರ ಎಪಿಎಂಸಿ ಆವರಣದಲ್ಲಿ ಸಮಾರಂಭ ನಡೆಯಲಿದೆ ಎಂದರು.
ಡಿ. 5ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಶ್ರೀ ಅಂಜನಾದ್ರಿ ಪರ್ವತ ಕಿಷ್ಕಿಂದ ಆನೆಗುಂದಿಯಲ್ಲಿ ನಡೆಯಲಿರುವ ಹನುಮಾ ಮಾಲಾ ಕಾರ್ಯಕ್ರಮದ ನಿಮಿತ್ತ ಈ ಬೃಹತ್ ಸಂಕೀತ೯ನಾ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಬಜರಂಗದಳ ಕಾಯ೯ಕತ೯ರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಆಗಮಿಸಿ, ಶ್ರದ್ಧಾ, ಭಕ್ತಿ ಜೊತೆಗೆ ಹನುಮ ಮಾಲಾಧಾರಣೆ ಮಾಡಿ ವೃತಾಚರಣೆ ಮಾಡುವ ಮೂಲಕ ಕಾಯ೯ಕತ೯ರು ಇನ್ನಷ್ಟು ಸಂಸ್ಕಾರಯುತಗೊಳಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಹ ಸಂಯೋಜಕ ಬಸವರಾಜ ಸುಗೂರ,ಅಂಬರೀಶ್ ಸುಲೇಗಾಂವ್, ಶ್ರೀಮಂತ ನವಲದಿ,ಅಶ್ವಿನಕುಮಾರ್ ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!