ಹೊಸದಿಗಂತ ವರದಿ, ಕಲಬುರಗಿ:
ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಬಾರಿ ಮಳೆಯಾಗುತ್ತಿದ್ದು,ಮೇಘಾಭ೯ಟಕ್ಕೆ ಕಲಬುರಗಿ ಜನರು ಅಕ್ಷರಶಃ ಹೈರಾಣಾಗುತ್ತಿದ್ದಾರೆ.ಇದರ ಮಧ್ಯೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆನಕನಳ್ಳಿ ಗ್ರಾಮದ ಹಲವು ರಸ್ತೆಗಳು ಕೆರೆಗಳಾಗಿ ಮಾಪ೯ಟ್ಟಿವೆ.
ಬಾರಿ ಮಳೆಯಿಂದಾಗಿ ತಾಲೂಕಿನ ಬೆನಕನಳ್ಳಿ ಗ್ರಾಮದ ಪಕ್ಕದ ನಾಲಾ ನೀರು ಗ್ರಾಮಕ್ಕೆ ನುಗ್ಗಿ ಅವಾಂತರ ಮಾಡಿದ್ದು,ಹತ್ತಾರು ಮನೆಯೊಳಗಡೆ ನೀರು ನುಗ್ಗಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ನೀರಿನ ಪಾಲಾಗಿವೆ.
ಇನ್ನೂ ಗ್ರಾಮದಲ್ಲಿ ರಭಸವಾಗಿ ನಾಲೆಯ ನೀರು ಹರಿಯುತ್ತಿದ್ದು,ಮನೆಯಿಂದ ಹೊರಬಾರದ ಹಾಗೇ ಮಳೆ ನೀರು ದಿಗ್ಬಂಧನ ಹಾಕಿದೆ.ಕುಡಿಯುವ ನೀರಿಗೂ ಸಹ ಪರದಾಡುವಂತಹ ಪರಿಸ್ಥಿತಿ ಗ್ರಾಮದಲ್ಲಿ ನಿಮಾ೯ಣವಾಗಿದ್ದು,ತಾಲೂಕಿನಾದ್ಯಂತ ಬಾರಿ ಮಳೆಯಿಂದಾಗಿ ಜಲ ಅವಘಡ ಉಂಟಾಗಿದೆ.