ಹೊಸದಿಗಂತ ವರದಿ ಕಲಬುರಗಿ:
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಲಬುರಗಿ ಜಿಲ್ಲೆಯಾದ್ಯಂತ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗಿದ್ದು,ಬಾವಿಯಲ್ಲಿ ಸತತ ಎರಡು ಗಂಟೆಗೂ ಅಧಿಕ ಕಾಲ ಜಲಯೋಗಾಸನ ಮಾಡುವ ಮೂಲಕ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮ ಪಂಚಾಯತ್ ಸದಸ್ಯ ಪವನ್ ಕುಮಾರ್ ವಳಕೇರಿ ಅವರು ಬಾವಿಯೊಳಗೆ ಜಲಯೋಗಾಸನ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಯೋಗ ದಿನವನ್ನು ಆಚರಿಸಿದ್ದಾರೆ.
ನಂದಿಕೂರ ಗ್ರಾಮದ ಮಲ್ಲೆಶಪ್ಪಾ ಎಂಬುವವರ ತೋಟದ ಬಾವಿಯಲ್ಲಿ ಜಲಯೋಗಾಸನ ಮಾಡಿದ್ದು, ಎಲ್ಲರ ಗಮನ ಸೆಳೆಯುವ ಜೊತೆಗೆ ಯುವಕರಿಗೆ ಸ್ಫೂರ್ತಿ ನೀಡಿದ್ದಾರೆ. ಪವನ್ ವಳಕೇರಿ ಅವರು ಕಳೆದ ಹಲವು ವರ್ಷಗಳಿಂದ ಬಾವಿಯಲ್ಲಿ ಜಲಯೋಗಾಸನ ಮಾಡುತ್ತಾ ಬಂದಿರುವುದು ವಿಶೇಷ.