ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಘವ ಚೈತನ್ಯ ರಥಯಾತ್ರೆಗೆ ಕಲಬುರಗಿ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಶಿವರಾತ್ರಿಯಂದು ಕಲಬರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ರಥಯಾತ್ರೆ ನಡೆಸಲು ಹಿಂದೂ ಮುಖಂಡರು ಅನುಮತಿ ಕೋರಿದ್ದರು. ಪ್ರಸ್ತುತ ಲಾಡ್ಲೆ ಮಶಾಕ್ ದರ್ಗಾ ವಿವಾದದ ಹಿನ್ನೆಲೆಯಲ್ಲಿ ಷರತ್ತುಬದ್ಧ ಅನುಮೋದನೆ ನೀಡಲಾಗಿದೆ.
ರಥಯಾತ್ರೆ ವೇಳೆ ಡಿಜೆ, ಸಂಚಾರ ನಿಯಮ ಉಲ್ಲಂಘಿಸುವಂತಿಲ್ಲ. ಬೇರೆ ಸಮುದಾಯಗಳ ವಿರುದ್ಧ ಯಾರೂ ಘೋಷಣೆ ಕೂಗುವಂತಿಲ್ಲ. ರಾಘವ ಚೈತನ್ಯ ರಥಯಾತ್ರೆಯು ವಿವಾದಿತ ಸ್ಥಳಕ್ಕೆ ಪ್ರವೇಶಿಸುವಂತಿಲ್ಲ. ಸೂರ್ಯಾಸ್ತದ ನಂತರ ರಥಯಾತ್ರೆ ನಡೆಸದಂತೆ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ. ಕಳೆದ ಬಾರಿ ಶಿವರಾತ್ರಿಯ ದಿನ ಲಾಡ್ಲೆ ಮಶಾಕ್ ದರ್ಗಾದಲ್ಲಿ ಗಲಭೆ ನಡೆದಿತ್ತು. ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವೇಳೆ ಭಾರೀ ಗಲಾಟೆ ನಡೆದಿತ್ತು. ಹಾಗಾಗಿ ಈ ಬಾರಿ ಈ ಅವಘಡ ತಡೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ.