ಹೊಸದಿಗಂತ ಕಲಬುರಗಿ:
ನಗರದ ಹೊರವಲಯದ ಕೇಂದ್ರ ಕಾರಾಗೃಹ ಈಗ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರ ಚರ್ಚೆ, ಆಇಈಕೆಗೆ ಗ್ರಾಸವಾಗುತ್ತಿದ್ದು, ಇದೀಗ ಇದೇ ಕಾರಾಗೃಹದ ಒಳ ಗೋಡೆಯ ಪಕ್ಕದಲ್ಲಿ ನಿಷೇಧಿತ ತಂಬಾಕು ವಸ್ತುಗಳು ಪತ್ತೆಯಾಗಿವೆ!
ಕಲಬುರಗಿ ಕೇಂದ್ರ ಕಾರಾಗೃಹದ ಹೊರ ಭಾಗದಿಂದ ಬಾಲ್ ಆಕಾರದಲ್ಲಿ ಉಂಡೆ ಮಾಡಿ, ಪ್ಲಾಸ್ಟಿಕ್ ಚೀಲದಲ್ಲಿ ನಿಷೇಧಿತ ವಸ್ತುಗಳಾದ ತಂಬಾಕು, ಗುಟ್ಕಾ, ಬೀಡಿ ಸಿಗರೇಟು, ಪಾನ್ ಮಸಾಲಾ ಪತ್ತೆಯಾಗಿದ್ದು, ಜೈಲಿನಲ್ಲಿರುವ ತಮ್ಮವರ ಕೈದಿಗಳಿಗೆ ಈ ನಿಷೇಧಿತ ವಸ್ತುಗಳನ್ನು ಬಿಸಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ನಿಷೇಧಿತ ವಸ್ತುಗಳನ್ನು ಕಾರಾಗೃಹದ ಕರ್ತವ್ಯನಿರತ ಜೈಲು ಸಿಬ್ಬಂದಿ ಸಂಗೀತಾ ತಮ್ಮ ವಶಕ್ಕೆ ಪಡೆದಿದ್ದಾರೆ.
ಕೇಂದ್ರ ಕಾರಾಗೃಹದ ಕಾಂಪೌಂಡ್ ಒಳಗಡೆ ನಿಷೇಧಿತ ವಸ್ತುಗಳನ್ನು ಯಾರು ಯಾರಿಗಾಗಿ ಬಿಸಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು,ಈ ಕುರಿತು ಪರಹತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.