ಕಲಬುರಗಿ ಮಹಾನಗರ ಪಾಲಿಕೆ ಎಲೆಕ್ಷನ್‌: ಕೈಗೆ ಮತ್ತೆ ಅಧಿಕಾರ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೈ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವರ್ಷಾ ಜಾನೆ 36 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯ ೨೩ನೇ ಅವಧಿಗೆ ನಡೆದ ಚುನಾವಣೆಯಲ್ಲಿ ವರ್ಷಾ ಜಾನೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಗಂಗಮ್ಮ ಮನ್ನೋಳಿ ಅವರಿಗೆ 27 ಮತ ಸಿಕ್ಕಿದ್ದು, ಬಹುಮತದ ಬಲದಿಂದ ಕಾಂಗ್ರೆಸ್ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ತನ್ನಮಿಡಿತವನ್ನು ಪುನಃ ಪಡೆದುಕೊಂಡಿದೆ.

ಮಹಾಪೌರ ಚುನಾವಣೆಯ ನಂತರ ಉಪಮೇಯರ್ ಹುದ್ದೆಗಾಗಿ ಪ್ರಕ್ರಿಯೆ ಆರಂಭವಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಪಮೇಯರ್ ಹುದ್ದೆ ಯಾರು ಗಲ್ಲಿಗೇರಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ತಾರಕಕ್ಕೆ ಏರಿದೆ.

ಉಪಮೇಯರ್ ಆಗಿ ತೃಪ್ತಿ ಅಲ್ಲದ್ (ಲಾಖೆ) ಆಯ್ಕೆ

ಕಲಬುರಗಿ ಮಹಾನಗರ ಪಾಲಿಕೆಯ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತೃಪ್ತಿ ಅಲ್ಲದ್ (ಲಾಖೆ) 33 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪರಾಭವಗೊಂಡಿದ್ದು, ಉಪಮೇಯರ್ ಹುದ್ದೆಯನ್ನೂ ಮತ್ತೊಮ್ಮೆ ಕಾಂಗ್ರೆಸ್ ಹಿಡಿಪಟ್ಟಿದೆ.

ಈ ಮೂಲಕ ಮೇಯರ್ ಹಾಗೂ ಉಪಮೇಯರ್ ಸ್ಥಾನ ಎರಡನ್ನೂ ಗೆಲ್ಲಲು ಕಾಂಗ್ರೆಸ್ ಯಶಸ್ವಿಯಾಗಿದೆ. ರಾಜಕೀಯ ತಂತ್ರ, ಭಾರಿ ಬೆಂಬಲದಿಂದ ತೃಪ್ತಿ ಅಲ್ಲದ್ (ಲಾಖೆ) ಗೆಲುವು ಸಾಧಿಸಿದ್ದು, ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!