ಹೊಸ ದಿಗಂತ ವರದಿ,ಕಲಬುರಗಿ:
ನಗರದ ಎಂಬಿ ನಗರ ಪೋಲಿಸ್ ಠಾಣೆ ವ್ಯಾಪ್ತಿಯ ಜಯನಗರ ಕ್ರಾಸ್ ದಾನೇಶ್ವರಿ ನಿಲಯದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ೧೩ ಜನ ಜೂಜುಕೋರರನ್ನು ಬಂಧಿಸಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಡಾ.ಶರಣಪ್ಪಾ ಎಸ್ ಡಿ ತಿಳಿಸಿದ್ದಾರೆ.
ನಗರ ಪೋಲಿಸ್ ಆಯುಕ್ತಾಲಯದ ವಿವಿಧ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ,ಜೂಜಾಟವಾಡುತ್ತಿದ್ದ ೧೩ ಜನರನ್ನು ಬಂಧಿಸಿ, ೨,೧೧,೧೮೦ ರೂಪಾಯಿ ಜಪ್ತಿಪಡಿಸಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸದರಿ ದಾಳಿಯನ್ನು ಯಶಸ್ಸಿಯಾಗಿ ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


