ಹೊಸದಿಗಂತ ವರದಿ, ಕಲಬುರಗಿ:
ಖಾಸಗಿ ಫೈನಾನ್ಸ್ನಲ್ಲಿನ ಬಾಕಿ ತೀರಿಸಲು ಸ್ನೇಹಿತರಿಂದ ಕಡ ತಂದು ಮನೆಯಲ್ಲಿಟ್ಟಿದ್ದ 18 ಲಕ್ಷ ರೂ. ಕಳ್ಳತನವಾದ ಘಟನೆ ಪ್ರಕೃತಿ ಕಾಲೊನಿಯ ಕ್ಯೂಪಿ ಲೇಔಟ್ನಲ್ಲಿ ನಡೆದಿದೆ.
ಹೋಟೆಲ್ ವ್ಯಾಪಾರಿ ರವಿಚಂದ್ರ ಪುಟಗಿ ಅವರ ಮನೆ ಕಳ್ಳತನವಾಗಿದೆ. ಖಾಸಗಿ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದು ಅದನ್ನು ತೀರಿಸಲು ಸ್ನೇಹಿತರಿಂದ ಹಣ ತಂದು ಮನೆಯಲ್ಲಿಟ್ಟಿದ್ದರು. ಮೇ.20ರಂದು ಮದುವೆ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ಹೋಗಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿದ್ದು ಕಂಡು ಬಂದಿದೆ.
ಮನೆಯ ಕೀಲಿ ಮುರಿದ ಕಳ್ಳರು ಬೆಡ್ ರೂಮ್ನಲ್ಲಿನ ಅಲಮಾರದಲ್ಲಿನ 18 ಲಕ್ಷ ರೂ. ನಗದು 40 ಸಾವಿರ ರೂ.ಮೌಲ್ಯದ ಬೆಳ್ಳಿ ಸಾಮಾನು ಸೇರಿ 18.50 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಿದ್ದಾರೆ.