ಹೊಸ ದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ನದಿ ತೀರದ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಯತೀರ್ಥರ ಆರಾಧನೆ ಬುಧವಾರ ಸಂಪನ್ನಗೊಂಡಿತು.
ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆದ ಉತ್ತರಾರಾಧನೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.ಉತ್ತರಾರಾಧನೆಯಂದು ಶ್ರೀಗಳಿಂದ ಸುಧಾಪಾಠ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ದಕ್ಷಿಣಾಯನ ಪರ್ವಕಾಲದ ಅಂಗವಾಗಿ ದಂಡೋದಕ ಸ್ನಾನ ಮುದ್ರಾ ಧಾರಣೆ ರಾಮದೇವರ ಪೂಜೆ ತೀರ್ಥ ಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರೀಮದ್ ಜಯತೀರ್ಥರ ಮೂಲ ವೃಂದಾವನ ಕಾಗಿಣಾ ನದಿ ತೀರದ ಮಳಖೇಡದಲ್ಲಿ ಜಯತೀರ್ಥರ ಉತ್ತರಾರಾಧನೆಯಂದು ದಕ್ಷಿಣಾಯನ ಪರ್ವಕಾಲದ ಅಂಗವಾಗಿ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ದಂಡೋದಕ ಸ್ನಾನರೀಮದ್ ಜಯತೀರ್ಥರ ಮೂಲ ವೃಂದಾವನ ಕಾಗಿಣಾ ನದಿ ತೀರದ ಮಳಖೇಡದಲ್ಲಿ ಜಯತೀರ್ಥರ ಉತ್ತರಾರಾಧನೆಯಂದು ದಕ್ಷಿಣಾಯನ ಪರ್ವಕಾಲದ ಅಂಗವಾಗಿ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಬುಧವಾರ ದಂಡೋದಕ ಸ್ನಾನ ಜರುಗಿತು.