ಹೊಸದಿಗಂತ ವರದಿ, ಕಲಬುರಗಿ:
ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಶಾಂತಿ ಕೋರಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ಹಿಂದೂ ಜಾಗೃತಿ ಸೇನೆ ವತಿಯಿಂದ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಹೋರಾಟಗಾರ ಎಂ.ಎಸ್.ಪಾಟೀಲ್ ನರಿಬೋಳ ಅವರು, ಭಾರತ ದೇಶದ ಹೆಮ್ಮೆಯ ಪುತ್ರಿ ಭಾರತ ರತ್ನ ಲತಾ ಮಂಗೇಶ್ಕರ್ ಅವರ ನಿಧನ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಕಂಠದಿಂದ ಸಾವಿರಾರು ಹಾಡುಗಳನ್ನು ಹಾಡಿ,ಇಡೀ ದೇಶಕ್ಕೆ ಚಿರಪರಿಚಿತ ಆದಂತಹ ಗಾಯಕಿ ಅವರಾಗಿದ್ದರು ಎಂದರು.
ಅವರ ನಿಧನದಿಂದ ಇಡೀ ದೇಶವೇ ದುಃಖದಲ್ಲಿ ಮುಳುಗಿದ್ದು, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಭಕ್ತಿಪೂವ೯ಕ ಶೃಧ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ, ಹಿಂದೂ ಜಾಗೃತಿ ಸೇನೆ ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ, ನಗರ್ ಅಧ್ಯಕ್ಷ ದಶರಥ್ ಇಂಗೊಳೆ, ಉತ್ತರ ವಲಯ ಅಧ್ಯಕ್ಷ ಮಹದೇವ್ ಕೊತನೂರ್, ನಗರ ವಿದ್ಯಾರ್ಥಿ ಘಟಕ ಅಧ್ಯಕ್ಷ ಪವನ್ ಕದಂ, ಮಹಿಳಾ ಘಟಕ ಅಧ್ಯಕ್ಷ ಸಂಜನಾ ಮಂಗಳಮುಖಿ, ಸೋನಾಕ್ಷಿ ಮಂಗಳಮುಖಿ, ಸುಲ್ತಾನಪುರ್, ಚಿದಾನಂದ ಸ್ವಾಮಿ, ಸಂಗು ಕಾಳನೂರ್ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.