ಕಾಲೂರು, ಭಾಗಮಂಡಲ, ಸಂಪಾಜೆ, ಕಕ್ಕಬ್ಬೆ, ಕುಟ್ಟ… ಕೊಡಗಿನಲ್ಲಿ ನಕ್ಸಲರ ಹೆಜ್ಜೆ ಸಪ್ಪಳ ಇದೇ ಮೊದಲೇನಲ್ಲ!

ಹೊಸದಿಗಂತ, ಮಡಿಕೇರಿ:

ಲೋಕಸಭಾ ಚುನಾವಣೆಗೆ ದಿನನಿಗದಿಯಾಗಿರುವ ಬೆನ್ನಿಗೇ ಕೊಡಗು ದಕ್ಷಿಣ ಕನ್ನಡ ಗಡಿ ಭಾಗ ಕೊಡಗಿನ ಗಡಿಯಾದ ಕಡಮಕಲ್, ಕೂಜಿಮಲೆ ವ್ಯಾಪ್ತಿಯಲ್ಲಿ ನಕ್ಸಲ್ ಓಡಾಟದ ಸುದ್ದಿ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ನಿದ್ದೆಗೆಡುವಂತೆ ಮಾಡಿದೆ.

ಕೊಡಗಿನಲ್ಲಿ ನಕ್ಸಲರ ಹೆಜ್ಜೆ ಗುರುತು ಇದೇ ಮೊದಲೇನಲ್ಲ. ಕೊಡಗಿನ ಕಾಲೂರು ಗ್ರಾಮದಲ್ಲಿ 2012ರಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರಲ್ಲದೆ, 2016ರ ನವೆಂಬರ್‌ನಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ 2018ರ ಫೆಬ್ರವರಿಯಲ್ಲಿ ನಾಲಡಿ ಗ್ರಾಮದಲ್ಲಿ, ಜೂನ್ ತಿಂಗಳಿನಲ್ಲಿ ಸಂಪಾಜೆ ವ್ಯಾಪ್ತಿಯಲ್ಲಿ, 2019ರ ಏಪ್ರಿಲ್‌ನಲ್ಲಿ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್‌ನಲ್ಲಿ, 2023ರ ಮೇ ತಿಂಗಳಿನಲ್ಲಿ ಕೊಡಗು-ಕೇರಳ ಗಡಿಯ ಬಿರುನಾಣಿ ಸಮೀಪದ ಪೂಕೊಳ ಬಳಿ, ನವೆಂಬರ್‌ನಲ್ಲಿ ಕೊಡಗು-ಕೇರಳ ಗಡಿಯ ಕುಟ್ಟ ಸಮೀಪ ನಕ್ಸಲರು ಕಾಣಿಸಿಕೊಂಡಿದ್ದರು.

ಇದೀ ಮತ್ತೆ ಈ ಭಾಗದಲ್ಲಿ ವ್ಯಾಪಿಸಿರುವ ನಕ್ಸಲ್ ತಂಡದ ಓಡಾಟ ಸುದ್ದಿಗಳು ಇಲಾಖೆಗಳನ್ನಷ್ಟೇ ಅಲ್ಲ, ನಾಗರಿಕರನ್ನೂ ಚಿಂತೆಗೀಡುಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!