ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮಲ್ ಹಾಸನ್ ಅವರು ಕ್ಷಮೆ ಕೇಳುವ ರೀತಿ ಕಾಣುತ್ತಿಲ್ಲ. ಆದರೆ, ಕನ್ನಡದವರು ಅವರ ಸಿನಿಮಾ ರಿಲೀಸ್ಗೆ ಅವಕಾಶ ನೀಡಲು ಬಿಡುತ್ತಿಲ್ಲ. ಈಗ ಫಿಲ್ಮ್ ಚೇಂಬರ್ ಮತ್ತೆ ಕಮಲ್ಗೆ 24 ಗಂಟೆ ಟೈಮ್ ಕೊಟ್ಟಿದೆ.
ಕಮಲ್ ಹಾಸನ್ ಅವರು ವಿವಾದ ಮಾಡಿಕೊಂಡು ಕ್ಷಮೆ ಕೇಳಲು ರೆಡಿ ಇಲ್ಲ. ಈ ಕಾರಣಕ್ಕೆ ಅವರ ನಟನೆಯ ‘ಥಗ್ ಲೈಫ್’ ಚಿತ್ರದ ರಿಲೀಸ್ಗೆ ಕರ್ನಾಟಕದಲ್ಲಿ ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಈ ಮಧ್ಯೆ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಸಭೆ ನಡೆಸಲಾಯಿತು, ‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಅವರ ಕೋರಿಕೆ ಮೇರೆಗೆ ಕಮಲ್ಗೆ ಮತ್ತೆ 24 ಗಂಟೆ ಟೈಮ್ ಕೊಟ್ಟಿದೆ. ಈ ಬಗ್ಗೆ ಕಮಲ್ ಹಾಸನ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.