ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂಬ ನಟ ಕಮಲ್ ಹಾಸನ್ ಅವರ ಅಜ್ಞಾನದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸಿನಿಮಾ ರಿಲೀಸ್ ಸಮಯದಲ್ಲಿ ಇಂಥ ಹೇಳಿಕೆ ಕೊಟ್ಟು ಕಮಲ್ ಹಾಸನ್ ಇಡೀ ಸಿನಿಮಾದ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ.
ಕನ್ನಡದಲ್ಲಿ ಅವರ ಸಿನಿಮಾ ಬ್ಯಾನ್ ಆಗಬೇಕು ಎನ್ನುವ ಮಾತು ಕೂಡ ಮುನ್ನೆಲೆಗೆ ಬಂದಿದೆ. ಎಲ್ಲರೆದುರು ಕ್ಷಮೆ ಕೇಳಿದರೆ ಸದ್ಯ ಸಿನಿಮಾ ಲೈಫ್ ಉಳಿಯುವ ಸಾಧ್ಯತೆ ಇದೆ. ಆದರೆ ಕಮಲ್ ಹಾಸನ್ ಎಲ್ಲಿಯೂ ಪತ್ತೆಯೇ ಇಲ್ಲ ಎನ್ನುವಂತಾಗಿದ್ದಾರೆ. ಕರೆಗಳಿಗೂ ಸಿಗದೇ, ಮೆಸೇಜ್‌ಗಳಿಗೂ ಉತ್ತರ ನೀಡದೇ ಇದ್ದಾರೆ. ಸಾರ್ವಜನಿಕವಾಗಿಯೂ ಎಲ್ಲಿ ಕಾಣಿಸಿಕೊಂಡಿಲ್ಲ.