ಭಾಷಾ ವಿವಾದದ ನಡುವೆ ಬೆಂಗಳೂರು ದುರಂತದ ಬಗ್ಗೆ ಟ್ವೀಟ್‌ ಮಾಡಿದ ಕಮಲ್‌ ಹಾಸನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾಷಾ ವಿವಾದದ ನಡುವೆ ಕಮಲ್‌ ಹಾಸನ್‌ ಬೆಂಗಳೂರಿನಲ್ಲಿ ನಡೆದ ದುರಂತದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಥಗ್‌ಲೈಫ್‌ ರಿಲೀಸ್‌ ಆಗಿಲ್ಲ. ಈ ಮಧ್ಯೆ ಕಮಲ್‌ ಹಾಸನ್‌ ಬೆಂಗಲೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಎಕ್ಸ್ (ಟ್ವಿಟರ್) ಪೋಸ್ಟ್​​ನಲ್ಲಿ, “ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ದುರಂತ. ತೀವ್ರ ದುಃಖಿತನಾಗಿದ್ದೇನೆ ಮತ್ತು ಈ ದುಃಖದ ಕ್ಷಣದಲ್ಲಿ ನನ್ನ ಹೃದಯವು ಸಂತ್ರಸ್ತ ಕುಟುಂಬಗಳೊಂದಿಗಿವೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ” ಎಂದು ಹೇಳಿದ್ದಾರೆ.

ನಟನ ಪೋಸ್ಟ್​ ಮಿಶ್ರ ಪ್ರತಿಕ್ರಿಯೆಗೆ ಆಹ್ವಾನವಿಟ್ಟಿದೆ. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಈಗ ಬೆಂಗಳೂರು ದುರ್ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂಬರ್ಥದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!