ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಬುಲೆನ್ಸ್‌ನಲ್ಲಿ, ಅಟೋದಲ್ಲಿ ಮಗುವಿಗೆ ಜನ್ಮನೀಡಿದ ಸುದ್ದಿ ಓದಿರುತ್ತೀರಾ, ಆದರೆ ಇಲ್ಲೊಬ್ಬರು ತಾಯಿ ಚಲಿಸುತ್ತಿರುವ ರೈಲಿನಲ್ಲಿಯೇ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ!
ಈ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. 24 ವರ್ಷ ಪ್ರಾಯದ ಈ ಮಹಿಳೆ ತನ್ನ ಪತಿಯೊಂದಿಗೆ ಮಹಾರಾಷ್ಟ್ರದ ನಾಸಿಕ್‌ನಿಂದ ಮಧ್ಯಪ್ರದೇಶದ ಸತ್ನಾಗೆ ಪ್ರಯಾಣಿಸುತ್ತಿದ್ದರು. ಭೋಪಾಲ್ ಮತ್ತು ವಿದಿಶಾ ನಡುವೆ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ.
ತಕ್ಷಣವೇ ಆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಗರ್ಭಿಣಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ. ರೈಲು ವಿದಿಶಾ ರೈಲು ನಿಲ್ದಾಣಕ್ಕೆ ಬಂದ ನಂತರ, ತಾಯಿ ಹಾಗೂ ನವಜಾತ ಶಿಶುವನ್ನು ಹರ್ದಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಖುಷಿಯನ್ನು ಸಂಭ್ರಮಿಸಲು ಜನಿಸಿದ ಹೆಣ್ಣು ಮಗುವಿಗೆ ಕಾಮಯಾನಿ’ ಎಂದು ಅದೇ ರೈಲಿನ ಹೆಸರು ನಾಮಕರಣ ಮಾಡಲಾಗಿದೆ!