ಹೊಸದಿಗಂತ ವರದಿ ಬಾಗಲಕೋಟೆ:
ಮರಾಠಿಗರ ಆರಾಧ್ಯ ದೈವ ಪಂಢಿರಿನಾಥ ವಿಠೋಬ ಬಗ್ಗೆ ಅನೇಕ ವರ್ಣನೆಗಳಿವೆ. ವಿಠೋಭ ಕನ್ನಡ ನಾಡಿನವನು, ಇಲ್ಲಿ ಬಂದು ನೆಲೆಸಿ ಹರಿಸಿದನು ಅಂತ ಹೇಳಲಾಗಿದೆ. ವಿಠೋಭ ಯಾರು ಅಲ್ಲ, ಕನ್ನಡಿಗ ಎನ್ನುವ ಹೆಮ್ಮೆ ಪಡುವುದರ ಜೊತೆಗೆ ಉಡುಪಿ ಕೃಷ್ಣ ಎನ್ನುವುದು ಬಹಳ ಮುಖ್ಯ. ಈ ಕೃಷ್ಣನನ್ನು ಭಕ್ತಿಯ ಪರಂಪರೆ ಮೂಲಕ ತಿರುಗಿ ನೋಡುವಂತೆ ಮಾಡಿದ್ದು ಕನಕ ದಾಸರು ಎಂದು ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಹೇಳಿದರು.
ನಗರದಲ್ಲಿ ಜಿಲ್ಲಾಡಳಿತ ಆವರಣದಲ್ಲಿ ಕನಕದಾಸ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು, ಕಾಗಿನೆಲೆಯಿಂದ ಕನಕ ದಾಸರು ಹೇಗೆ ಮಾನವ ಶ್ರೇಷ್ಠರಾದರು. ಹಾಗೆಯೇ ನಾವೆಲ್ಲ ಅವರ ತತ್ವ ಆದರ್ಶ ಪಾಲನೆ ಮಾಡಬೇಕು. ಕನಕ ದಾಸರ ಜಯಂತಿ ಕೇವಲ ಅಚರಣೆಗೆ ಸೀಮಿತವಾಗಬಾರದು. ಬದುಕಿನ ಭಾಗವಾಗಬೇಕು ಎಂದು ತಿಳಿಸಿದರು.
ಕನಕದಾಸರ ಜೊತೆಗೆ ಉಡುಪಿ ಕೃಷ್ಣನಿಗೂ ಮಹಾರಾಷ್ಟ್ರ ವಿಠೋಭ ಮಾದರಿ ಅಲ್ಲಿನ ಸರ್ಕಾರ ಮಾನ್ಯತೆ ನೀಡಿದಂತೆ, ಇಲ್ಲಿನ ಸರ್ಕಾರದಿಂದ ಸರ್ಕಾರಿ ಗೌರವ ಸಲ್ಲಬೇಕು. ಮಹಾರಾಷ್ಟ್ರದಲ್ಲಿ ಅನೇಕ ರಾಜಕಾರಣಿಗಳು , ದೊಡ್ಡ ಮನುಷ್ಯರು ಬಾಳು ಮಾಮನ ಕುರಿ ಕಾಯುತ್ತಾರೆ. ಇಂತಹ ಶ್ರೇಷ್ಠ ಕುಲ ನಮ್ಮದು.
ಪರಿಸರದೊಂದಿಗಿನ ಬದುಕು ನಮ್ಮದು. ಹಾಲುಮತ ಸಮಾಜದ ಬಗ್ಗೆ ಮೊದಲು ನಾವು ಹೆಮ್ಮೆ ಪಡುವಂತಾಗಬೇಕು. ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕನಕ ದಾಸರ ದಾಸ ಸಾಹಿತ್ಯ ಪ್ರಕಟವಾಗಬೇಕು ಎಂದರು.
ವ್ಯಾಸರಾಯರು ದೇವರು ಎಲ್ಲಿದ್ದಾನೆ ಎಂದು ಕೇಳಿದಾಗ ದೇವರು ಇಲ್ಲದ ಸ್ಥಳ ಇಲ್ಲ ಅಂತ ಸಾಕ್ಷೀಕರಿಸಿದ್ದು ಕನಕ ದಾಸರು. ಅವರಿಗೆ ಜಾಗತಿಕ ಮಾನ್ಯತೆ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.