ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಏಳು ತಿಂಗಳಿಗೆ ಹುಟ್ಟಿದ ಮಕ್ಕಳು ಬದುಕೋದು ಕಷ್ಟ ಎಂದು ಹೇಳುತ್ತಾರೆ, ಮಕ್ಕಳು ಏನಿಲ್ಲಾ ಎಂದರೂ ಎರಡು ಕೆಜಿಯಾದ್ರೂ ಇರಬೇಕು ಎನ್ನುತ್ತಾರೆ. ಆದರೆ ಇಲ್ಲೊಂದು ಮಗು ಬರೀ ಅರ್ಧ ಕೆಜಿ ಇದೆ. ಆದರೂ ಬದುಕುವ ಛಲವನ್ನು ತೋರಿಸುತ್ತಿದೆ.
ಇದೊಂದು ಅಪರೂಪದ ಘಟನೆಯಾಗಿದೆ. ಅರ್ಧ ಕೆಜಿ ಇರುವ ಮಕ್ಕಳು ಬದುಕುವುದು ಕಷ್ಟ. ಆದರೆ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ (ರಿಮ್ಸ್) ಕಾಲೇಜಿನಲ್ಲಿ ಇರುವ ಮಗು ಬದುಕುವ ಉತ್ಸಾಹ ತೋರಿದೆ. ಮಗುವನ್ನು ಬದುಕಿಸಲು ವೈದ್ಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.
ಆದಿಲಾಬಾದ್ನಲ್ಲಿ ಮಹಿಳೆಯೊಬ್ಬರಿಗೆ ಬುಧವಾರ ಆರು ತಿಂಗಳಿಗೆ ಹೆರಿಗೆ ಆಗಿದೆ. ಮಗುವಿನ ತೂಕ 500 ಗ್ರಾಂ ಇದೆ. ತಕ್ಷಣವೇ ರಿಮ್ಸ್ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ ಮಗು ರವಾನಿಸಲಾಗಿದೆ.
ಇಷ್ಟು ಕಡಿಮೆ ಜನನ ತೂಕ ಹೊಂದಿರುವ ಶಿಶುಗಳು ಬದುಕುಳಿಯುವುದು ಅತ್ಯಂತ ಅಪರೂಪ. ಈ ಮಗು ಆಶ್ಚರ್ಯಕರ ಸ್ಥಿತಿಸ್ಥಾಪಕತ್ವವನ್ನು ತೋರಿಸುತ್ತಿದೆ ಮತ್ತು ಬದುಕಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಹೆಚ್ಚಿನ ರಿಸ್ಕ್ ನೊಂದಿಗೆ ಅವಧಿಪೂರ್ವ ಶಿಶುಗಳು ಜನಿಸುತ್ತೇವೆ. ಅಂಗಾಂಗಗಳು ಅಭಿವೃದ್ಧಿ ಆಗದಿರುವುದು ಮತ್ತು ತೀವ್ರ ಉಸಿರಾಟದ ತೊಂದರೆಗಳು ಸೇರಿದಂತೆ ಹಲವು ಸಮಸ್ಯೆಗಳಿರುತ್ತವೆ. ಆದರೂ ವೈದ್ಯಕೀಯ ಸಿಬ್ಬಂದಿ ಆಶಾವಾದಿಗಳಾಗಿದ್ದು, ಮಗುವಿನ ಆರೋಗ್ಯವನ್ನ 24/7 ಮೇಲ್ವಿಚಾರಣೆ ಮಾಡುತ್ತಲೇ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.