September 28, 2026
Monday, September 28, 2026
spot_img

ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಭೇಟಿ ನೀಡಿ ಹಿಂದೂ ಮಹಾಗಣಪತಿ ದರುಶನ ಪಡೆದ ಕನೇರಿ ಶ್ರೀಗಳು

ಹೊಸದಿಗಂತ ವರದಿ ಕಲಬುರಗಿ:

ನಗರದ ಕೋಟೆ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪನೆ ಮಾಡಲಾಗಿರುವ ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಭೇಟಿ ನೀಡಿದ ಕನೇರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳು ಹಿಂದೂ ಮಹಾಗಣಪತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು ಹಿಂದೂ ಮಹಾಗಣಪತಿಯ ಆರತಿ ನೆರವೇರಿಸಿ ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದರು. ಗಣೇಶೋತ್ಸವದ ಅಂಗವಾಗಿ ಸಮಿತಿಯು ರೂಪಿಸಿರುವ ಕೇದಾರನಾಥ ಮಾದರಿಯ ಮಂದಿರ ಹಾಗೂ 12 ಜ್ಯೋತಿರ್ಲಿಂಗಗಳ ಅಲಂಕಾರವನ್ನು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕ ವಿಜಯ ಮಾಹಾಂತೇಶ, ಪೂಜ್ಯ ಸವಿತಾನಂದ ಮಹಾಸ್ವಾಮೀಜಿಗಳು ಕೊಂಚೂರು ಸೇರಿದಂತೆ ಹಲವರು ಭಾಗವಹಿಸಿ ಮಹಾಗಣಪತಿಗೆ ಪೂಜೆ ಸಲ್ಲಿಸಿದರು.

ಈ ವೇಳೆ ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಶ್ರೀಮಂತ ರಾಜು ನವಲದಿ ಕನೇರಿ ಶ್ರೀಗಳಿಗೆ ಸಮಿತಿಯಿಂದ ಗೌರವಿಸಲಾಯಿತು.ಗೌರವಾಧ್ಯ ಮಲ್ಲಿಕಾರ್ಜುನ ಗಂಗಾ, ಸಂಜೀವ್ ಗುಪ್ತಾ, ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಸದಸ್ಯ ಶಿವರಾಜ ಸಂಗೋಳಗಿ, ಅಶ್ವಿನ್ ಕುಮಾರ್, ಪ್ರಶಾಂತ್ ಗುಡ್ಡಾ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Must Read