ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಗನಾ ರಣಾವತ್ ಅಂದರೆ ಕೇವಲ ಸಿನಿಮಾ ಮತವಲ್ಲವೈಯಕ್ತಿಕ ಕಾರಣಕ್ಕೂ ಸದಾ ಸುದ್ದಿಯಲ್ಲಿರುವ ನಟಿ. ಅದೇ ರೀತಿ ಈಗ ಅವರು ಉದ್ಯಮಿ ಈಸಿ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆಗೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಸಿನಿ ವೆಬ್‌ಸೈಟ್‌ಗಳಲ್ಲಿ ಬಲವಾಗಿ ಹರಿದಾಡುತ್ತಿದೆ.
ಸಲೂನ್ ಒಂದರ ಎದುರು ಕಂಗನಾ ಹಾಗೂ ಈಸಿ ಮೈ ಟ್ರಿಪ್‌ನ ಸಂಸ್ಥಾಪಕ ನಿಶಾಂತ್ ಪಿಟ್ಟಿ ಕೈ ಕೈ ಹಿಡಿದು ಓಡಾಡುತ್ತಿರುವ ಫೋಟೋವೊಂದನ್ನು ಸಿನಿಮಾ ಪಪಾರಾಜಿಗಳು ಸೆರೆ ಹಿಡಿದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ನಂತರ ಕಂಗನಾ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿಯೂ ಇವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದರಿಂದ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿದ್ದವು. ಆದರೆ ಈ ಸುದ್ದಿಗಳನ್ನು ನಟಿ ಕಂಗನಾ ರಣಾವತ್ ನಿರಾಕರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ನಟಿ, ‘ ತಾನು ನಿಶಾಂತ್ ಪಿಟ್ಟಿ ಜೊತೆ ಡೇಟಿಂಗ್ ಮಾಡ್ತಿಲ್ಲ, ಈಸಿ ಮೈ ಟ್ರಿಪ್ ಸಂಸ್ಥಾಪಕರಾಗಿರುವ ನಿಶಾಂತ್ ಪಿಟ್ಟಿ ಅವರಿಗೆ ಈಗಾಗಲೇ ಮದ್ವೆಯಾಗಿದ್ದು,ಅವರು ಖುಷಿಯಾಗಿ ಇದ್ದಾರೆ. ಮಾಧ್ಯಮಗಳಿಗೆ ನನ್ನ ವಿನಮ್ರ ಮನವಿ, ದಯವಿಟ್ಟು ಇಂತಹ ಸುಳ್ಳು ಸುದ್ದಿಯನ್ನು ದಯವಿಟ್ಟು ಹಬ್ಬಿಸಬೇಡಿ, ನಿಶಾಂತ್ ತಮ್ಮ ದಾಂಪತ್ಯದಲ್ಲಿ ಖುಷಿಯಾಗಿದ್ದು, ನಾನು ಬೇರೆ ಯಾರೊಂದಿಗೋ ಡೇಟಿಂಗ್‌ನಲ್ಲಿ ಇದ್ದೇನೆ. ಒಳ್ಳೆಯ ಸಮಯಕ್ಕಾಗಿ ನಿರೀಕ್ಷಿಸುತ್ತಿದ್ದೇನೆ. ನಮ್ಮನ್ನು ಮುಜುಗರಕ್ಕೊಳಪಡಿಸಬೇಡಿ, ಜೊತೆಯಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂಬ ಕಾರಣಕ್ಕೆ ಅವಿವಾಹಿತ ಹೆಣ್ಣು ಮಕ್ಕಳ ಹೆಸರು ಬೇರೆ ಯಾವುದೋ ಹೊಸ ವ್ಯಕ್ತಿ ಜೊತೆ ಸದಾ ಲಿಂಕ್ ಆಗುವುದು ಅಷ್ಟೊಂದು ಸರಿ ಕಾಣುವುದಿಲ್ಲ’ ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.