ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ‘ಎಮರ್ಜೆನ್ಸಿ’ (Emergency Movie) ಸಿನಿಮಾದ ಕೆಲಸಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿ ಇದ್ದು, ಇದರ ನಡುವೆ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಆಗಿದೆ.
ಕಂಗನಾ ರಣಾವತ್ ಅವರ ವಾಟ್ಸಪ್ (WhatsApp) ಸಂದೇಶ ಲೀಕ್ ಆಗಿದೆ. ಸ್ವತಃ ಕಂಗನಾ ಅವರೇ ಈ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಗೂಢಚಾರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೆಲ್ಲ ಮಾಡುತ್ತಿರುವುದು ಬಾಲಿವುಡ್ನ ಸ್ಟಾರ್ ದಂಪತಿ ಎಂದು ಕೂಡ ಕಂಗನಾ ರಣಾವತ್ (Kangana Ranaut) ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ರಣಾವತ್ ಅವರು ಈ ವಿಷಯ ಹಂಚಿಕೊಂಡಿದ್ದು, ಒಂದಷ್ಟು ದಿನಗಳಿಂದ ಅವರನ್ನು ಯಾರೋ ಹಿಂಬಾಲಿಸುತ್ತಿದ್ದಾರೆ. ಹೋದಲ್ಲಿ, ಬಂದಲ್ಲಿ ಅವರ ಫೋಟೋ ಕ್ಲಿಕ್ಕಿಸಲಾಗುತ್ತಿದೆ. ಅಲ್ಲದೇ ಆನ್ಲೈನ್ ಚಟುವಟಿಕೆಗಳ ಮೇಲೂ ಕಣ್ಣು ಇಡಲಾಗಿದೆ. ಇದನ್ನೆಲ್ಲ ಮಾಡಿಸುತ್ತಿರುವ ಸ್ಟಾರ್ ದಂಪತಿಗೆ ಕಂಗನಾ ರಣಾವತ್ ಅವರು ಎಚ್ಚರಿಕೆ ನೀಡಿದ್ದಾರೆ.
ಆ ಸ್ಟಾರ್ ನಟನ ಮೇಲೆ ಕಂಗನಾ ಅವರು ಒಂದು ಗಂಭೀರ ಆರೋಪ ಹೊರಿಸಿದ್ದಾರೆ. ‘ನೆಪೋಟಿಸಂ ಮಾಫಿಯಾದ ಆ ವಿದೂಷಕ ಒಮ್ಮೆ ನನ್ನ ಮನೆ ಬಾಗಿಲಿಗೆ ಬಂದು ಬಲವಂತಕ್ಕೆ ಯತ್ನಿಸಿದ್ದ. ಆತ ಸ್ತ್ರಿಲೋಲ ಅಂತಲೇ ಗುರುತಿಸಿಕೊಂಡಿದ್ದವನು. ಈಗ ನೆಪೋಟಿಸಂ ಸಂಘದ ಉಪಾಧ್ಯಕ್ಷ ಆಗಿದ್ದಾನೆ. ತನ್ನ ಹೆಂಡತಿಯನ್ನು ನಿರ್ಮಾಪಕಿ ಆಗು ಅಂತ ಒತ್ತಾಯಿಸುತ್ತಿದ್ದಾನೆ. ಮಹಿಳಾಪ್ರಧಾನ ಸಿನಿಮಾಗಳನ್ನು ಹೆಚ್ಚಾಗಿ ಮಾಡುವಂತೆ ಒತ್ತಾಯಿಸುತ್ತಿದ್ದಾನೆ’ ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.
ಬಾಲಿವುಡ್ನ ಯಾವುದೇ ಸೆಲೆಬ್ರಿಟಿ ಜೋಡಿಯ ಹೆಸರುಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗಿದೆ.
ಈ ವಿಚಾರಗಳನ್ನು ಬಹಿರಂಗ ಪಡಿಸಿದ ಮೇಲೆ ಆ ಸೆಲೆಬ್ರಿಟಿ ದಂಪತಿ ಸೈಲೆಂಟ್ ಆಗಿದ್ದಾರೆ. ಆ ಬಗ್ಗೆಯೂ ಕಂಗನಾ ರಣಾವತ್ ಅವರು ಮಾಹಿತಿ ನೀಡಿದ್ದಾರೆ. ಈಗ ಅವರ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.